ಬಾಡಿಗೆ ಬೇಡ, ಆಸೆ ಪೂರೈಸು ಎಂದು ಮನೆ ಮಾಲಿಕನಿಂದ ಮಹಿಳೆಗೆ ಕಿರುಕುಳ
ಚೆನ್ನೈ: ಬಾಡಿಗೆ ಬದಲು ತನ್ನ ಆಸೆಯನ್ನು ಪೂರೈಸು ಎಂದು ಮನೆ ಮಾಲಿಕನೋರ್ವ ಬಾಡಿಗೆದಾರ ಮಹಿಳೆಯನ್ನು ಪೀಡಿಸಿದ್ದು, ಇದೀಗ ಈತನನ್ನು ಪೊಲೀಸರು ಬಂಧಿಸಿದ ಘಟನೆ ತಮಿಳುನಾಡಿನ ಕೊಡುಂಗೈಯೂರ್ ನಲ್ಲಿ ನಡೆದಿದೆ.
ಜಯಕುಮಾರ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ಆಟೋ ಚಾಲಕರೊಬ್ಬರಿಗೆ ಮನೆ ಬಾಡಿಗೆಗೆ ನೀಡಿದ್ದ ಎಂದು ಹೇಳಲಾಗಿದೆ. ಆಟೋ ಚಾಲಕ ತನ್ನ ಕೆಲಸಕ್ಕೆ ತೆರಳಿದಾಗ, ಆತನ ಪತ್ನಿಗೆ ಮನೆ ಮಾಲಿಕ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ.
ನನಗೆ ಬಾಡಿಗೆ ಕೊಡುವುದು ಬೇಡ, ನನ್ನನ್ನು ಕಿಸ್ ಮಾಡಿದರೆ ಸಾಕು ಎಂದು ಆಟೋ ಚಾಲಕನ ಪತ್ನಿಯನ್ನು ಆರೋಪಿ ಜಯಕುಮಾರ್ ಪೀಡಿಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಇನ್ನೂ ಈ ವಿಚಾರವಾಗಿ ಆಟೋ ಚಾಲಕ ಜಯ ಕುಮಾರ್ ಗೆ ವಾರ್ನಿಂಗ್ ನೀಡಿದ್ದರೂ, ಆತನ ತನ್ನ ಚಾಳಿಯನ್ನು ಮುಂದುವರಿಸಿದ್ದ. ನಿನ್ನೆ ಮಹಿಳೆ ಒಬ್ಬರೇ ಇರುವಾಗ ಏಕಾಏಕಿ ಮನೆಗೆ ನುಗ್ಗಿದ ಜಯಕುಮಾರ್ ಮಹಿಳೆಯನ್ನು ಹಿಡಿದುಕೊಂಡು, ನನಗೆ ಬಾಡಿಗೆ ಬೇಡ ಕಿಸ್ ಕೊಡು ಎಂದು ಪೀಡಿಸಿದ್ದು, ಈ ವೇಳೆ ಮಹಿಳೆಯು ಆತನನ್ನು ತಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಮಹಿಳೆ ಹಾಗೂ ಆಕೆಯ ಪತಿ ನೀಡಿದ ದೂರಿನನ್ವಯ ಆರೋಪಿ ಜಯಕುಮಾರ್ ನನ್ನು ತಮ್ಮ ಶೈಲಿಯಲ್ಲಿ ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.