ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ: ಆರೋಪಿಗಳ ಬಂಧನ

jammu kashmer
18/03/2022

ಜಮ್ಮು-ಕಾಶ್ಮೀರ: ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಆರೋಪಿಗಳನ್ನು ಶ್ರೀನಗರ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬುಧವಾರ ಉಗ್ರರೊಂದಿಗೆ ಗುಂಡಿನ ಚಕಮಕಿ ವೇಳೆ ನಾಗರಿಕರ ಸುರಕ್ಷತೆಗೆ ಶ್ರಮಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಮೇಲೆಯೇ 15 ಜನ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು. ಈ ಆರೋಪಿಗಳನ್ನು ಶ್ರೀನಗರದ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶ್ರೀನಗರದ ನೌಗಮ್ ​ನಲ್ಲಿ ಮಾ.16ರಂದು ಮೂರು ಉಗ್ರರನ್ನು ಭದ್ರತಾ ಸಿಬ್ಬಂದಿ ಎನ್​​ಕೌಂಟರ್​ ಮಾಡಿದ್ದರು. ಈ ವೇಳೆ ನಾಗರಿಕರ ಸುರಕ್ಷತೆಗಾಗಿ ಪ್ರದೇಶವನ್ನು ತೆರವು ಮಾಡಲಾಗಿತ್ತು. ಆಗ ದೊಡ್ಡಮೊಟ್ಟದ ಗುಂಪೊಂದು ಸೇರಿ ಭದ್ರತಾ ಸಿಬ್ಬಂದಿ ಮೇಲೆಯೇ ಕಲ್ಲು ತೂರಾಟ ನಡೆಸಲಾರಂಭಿಸಿತ್ತು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಕಲ್ಲು ತೂರಾಟ ನಡೆಸಿದ 15 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಎನ್​ಕೌಂಟರ್​ ನಡೆದ ಬಳಿಕ ನಿಯಮ ಅನುಸಾರ ಇಡೀ ಪ್ರದೇಶದಲ್ಲಿ ನಾಗರಿಕರ ಸುರಕ್ಷತೆ ಬಗ್ಗೆ ಖಚಿತ ಪಡಿಸಿಕೊಳ್ಳಲಾಗುತ್ತಿತ್ತು. ಈ ಸಂದರ್ಭದಲ್ಲಿ ಗುಂಪೊಂದು ಲಾಠಿ ಮತ್ತು ಕಲ್ಲುಗಳನ್ನು ಹಿಡಿದುಕೊಂಡು ಬಂದು ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮೇಲೆ ಕಲ್ಲುಗಳನ್ನು ತೂರಾಟ ನಡೆಸಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂದು, ಬಾಬಾ ಸಾಹೇಬ್ ಅಂಬೇಡ್ಕರರು ಕಣ್ಣೀರು ಹಾಕಿದ ದಿನ

ಬಟ್ಟೆ ಅಂಗಡಿ ಮಾಲಕಿಯನ್ನು 30ಕ್ಕೂ ಹೆಚ್ಚು ಬಾರಿ ಇರಿದು ಹತ್ಯೆ!

ಕಲ್ಲಂಗಡಿ ಹಣ್ಣು ಕತ್ತರಿಸಿ ಗೆಳತಿಯ ಹುಟ್ಟುಹಬ್ಬ ಆಚರಣೆ: ವಿದ್ಯಾರ್ಥಿಗೆ ಶಿಕ್ಷಕರಿಂದ ಥಳಿತ

ಮಗಳಿಗೆ ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಇರುವುದಿಲ್ಲ: ಸುಪ್ರೀಂಕೋರ್ಟ್

ಪುನೀತ್ ರಾಜ್ ಕುಮಾರ್ ಕೊನೆಯ ಚಿತ್ರ ‘ಜೇಮ್ಸ್’ಗೆ ಅಭಿಮಾನಿಗಳ ಸ್ವಾಗತ ಹೇಗಿತ್ತು?

 

ಇತ್ತೀಚಿನ ಸುದ್ದಿ

Exit mobile version