ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು
ಗದಗ: ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಚಾರಕ್ಕಿಂತಲೂ ಹೆಚ್ಚು ನಾಯಕರ ಯಡವಟ್ಟುಗಳೇ ಸುದ್ದಿಯಾಗುತ್ತಿವೆ. ಜನಾಶೀರ್ವಾದ ಕಾರ್ಯಕ್ರಮದಲ್ಲಿ ಉಗ್ರ ಸಂಘಟನೆಗಳಂತೆ ಬಂದೂಕಿನಿಂದ ಗುಂಡು ಹಾರಿಸಿದ ವಿಚಾರ ಭಾರೀ ಟೀಕೆಗೊಳಗಾಗಿತ್ತು. ಇದೀಗ ಮತ್ತೊಂದು ಯಡವಟ್ಟಿಗೆ ಬಿಜೆಪಿ ನಾಯಕರು ಸಿಲುಕಿದ್ದಾರೆ.
ಜನಾಶೀರ್ವಾದ ಯಾತ್ರೆಯಲ್ಲಿ ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರು ಯಡವಟ್ಟು ಮಾಡಿದ್ದು, ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾರೆ ಎಂದು ವರದಿಯಾಗಿದ್ದು, ಮನೆ ಮಂದಿಗೆ ಉದ್ಯೋಗದ ಭರವಸೆಯನ್ನು ಕೂಡ ನೀಡಿ ಬಂದಿದ್ದಾರೆ ಎಂದು ಮಾಧ್ಯವೊಂದು ವರದಿ ಮಾಡಿದೆ.
ಮಾಹಿತಿಯ ಕೊರತೆಯಿಂದಾಗಿ ಈ ಯಡವಟ್ಟಾಗಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಗದಗದ ಮುಳಗುಂದ ಪಟ್ಟಣದ ಯೋಧ ಬಸವರಾಜ್ ಎಂಬವರು ಕರ್ತವ್ಯದ ವೇಳೆಯಲ್ಲಿ ರೈಲು ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು.
ಜನಾಶೀರ್ವಾದ ಯಾತ್ರೆಯ ವೇಳೆ ಬಸವರಾಜ್ ಅವರ ಮನೆಗೆ ಹೋಗಬೇಕಿದ್ದ ಸಚಿವರು ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ರವಿ ಕುಮಾರ್ ಮನೆಗೆ ತೆರಳಿ ಸಾಂತ್ವನ ಹೇಳಿದ್ದು, ಇದೂ ಸಾಲದು ಎಂಬಂತೆ ರವಿಕುಮಾರ್ ಪತ್ನಿಗೆ ನೌಕರಿ, ಜಮೀನು ನೀಡುವ ಭರವಸೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ | ಸಚಿವೆ ಶೋಭಾ ಕರಂದ್ಲಾಜೆ
ದೇವರಾಜ ಅರಸರ ದುರಂತ ಅಂತ್ಯಕ್ಕೆ ಕಾಂಗ್ರೆಸ್ ಕಾರಣ | ರಘು ಆರ್.ಕೌಟಿಲ್ಯ ಆರೋಪ
ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು
ರಾಜೀವ್ ಗಾಂಧಿ 77ನೇ ಜನ್ಮ ದಿನಾಚರಣೆ: ವೀರಭೂಮಿಯಲ್ಲಿ ನಮನ ಸಲ್ಲಿಸಿ, ಕಾಲ ಕಳೆದ ರಾಹುಲ್ ಗಾಂಧಿ
ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣವೇ ನಟಿಯ ಬೆಡ್ ರೂಂ ದೃಶ್ಯ ವೈರಲ್ ! | ನಟಿಯ ಪ್ರತಿಕ್ರಿಯೆ ಏನು?
ಅಫ್ಘಾನ್ ನಲ್ಲಿ ತಾಲಿಬಾನಿಗಳ ವಿಜಯ: ಭಾರತ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು | ತಜ್ಞರ ಎಚ್ಚರಿಕೆ