ಮನೆಯ ಬಾಗಿಲು ಮುರಿದು ಲಕ್ಷಾಂತರ ರೂಪಾಯಿ ದೋಚಿದ ಕಳ್ಳರು

crime news
08/09/2022

ಉಡುಪಿ: ಮನೆಯ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿರುವ ಘಟನೆ ಸಾಸ್ತಾನ ಪಾಂಡೇಶ್ವರದಲ್ಲಿ ಸೆ.8ರಂದು ಬೆಳಕಿಗೆ ಬಂದಿದೆ.

ರಾಜೇಶ್‌ ಪೂಜಾರಿ ಎಂಬವರಿಗೆ ಸೇರಿದ ಪಾಂಡೇಶ್ವರದಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿದೆ. ರಾಜೇಶ್ ಅವರು, ಬೆಂಗಳೂರಿನಲ್ಲಿ ಹೋಟೇಲ್‌ ವ್ಯವಹಾರ ಮಾಡಿಕೊಂಡಿದ್ದು, ಮದುವೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಊರಿಗೆ ಬಂದಿದ್ದರು.

ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸು ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ರಾಜೇಶ್ ಅವರು ಪತ್ನಿ, ಮಗು ಹಾಗೂ ತನ್ನ ಚಿನ್ನದ ಆಭರಣಗಳನ್ನು ತಮ್ಮ ಮೂಲಮನೆಯಾದ ಸಾಸ್ತಾನ ಪಾಂಡೇಶ್ವರದಲ್ಲಿನ ಮನೆಯ ಗೋಡ್ರೇಜ್‌ ನಲ್ಲಿ ಇಟ್ಟಿದ್ದರು. ಅದರ ಜೊತೆಗೆ ಹಳೆಯ ಮನೆಯ ರಿಪೇರಿಗೆಂದು 4.05 ಲಕ್ಷ ರೂ. ನಗದು ಹಣವನ್ನು ಇಟ್ಟಿದ್ದರು.

ರಾಜೇಶ್ ಅವರ ಚಿಕ್ಕಪ್ಪ ಸುಬ್ಬಣ್ಣ ಪೂಜಾರಿ ಅವರು ಸೆ. 7ರಂದು ಮನೆಯ ಕಲ್ಲುಕುಟಿಗ ದೇವಸ್ಥಾನಕ್ಕೆ ಪೂಜೆಗೆಂದು ಹೋದ ವೇಳೆ ಬಾಗಿಲಿನ ಚಿಲಕ ಮುರಿದಿದ್ದು, ಬಾಗಿಲು ತೆರೆದು ಮನೆಯ ಒಳ ಹೋದಾಗ ಮನೆಯ ಕೋಣೆಗಳಲ್ಲಿನ ಗೋಡ್ರೇಜ್‌ ಗಳು ತೆರೆದಿರುವುದು ಕಂಡುಬಂದಿದೆ.

ಅವರು ಕೂಡಲೇ ರಾಜೇಶ್ ಅವರ ತಮ್ಮನಿಗೆ ವಿಷಯ ತಿಳಿಸಿದ್ದು, ಆತ ಬಂದು ನೋಡಿದಾಗ ಕಳ್ಳತನ ಆಗಿರುವುದು ಖಚಿತವಾಗಿದೆ. ಅದರಂತೆ ರಾಜೇಶ್ ಅವರು ಇಂದು ಬೆಂಗಳೂರಿನಿಂದ ಮನೆಗೆ ಬಂದು ನೋಡುವಾಗ, ಯಾರೋ ಕಳ್ಳರು ಗೋಡ್ರೇಜ್ ನ ಲಾಕರ್ ಅನ್ನು ಮುರಿದು ಸುಮಾರು 10 ಲಕ್ಷ ಮೌಲ್ಯದ ಒಟ್ಟು 291 ಗ್ರಾಮ್‌ ಚಿನ್ನದ ಆಭರಣಗಳು ಮತ್ತು. 4,05 ಲಕ್ಷ ರೂ ನಗದು ಕಳ್ಳತನ ಮಾಡಿಕೊಂಡು ಹೋಗಿರುವುದು ಖಚಿತವಾಗಿದೆ. ಈ ಬಗ್ಗೆ ಕೋಟ  ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version