ಸಹೋದರಿಗೆ ಬಾಗಿನ ನೀಡಿ ಪುತ್ರಿಯೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ಸಹೋದರ, ಪುತ್ರಿ ಇಬ್ಬರೂ ಅಪಘಾತಕ್ಕೆ ಬಲಿ - Mahanayaka
3:27 AM Wednesday 11 - December 2024

ಸಹೋದರಿಗೆ ಬಾಗಿನ ನೀಡಿ ಪುತ್ರಿಯೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ಸಹೋದರ, ಪುತ್ರಿ ಇಬ್ಬರೂ ಅಪಘಾತಕ್ಕೆ ಬಲಿ

chikkamagaluru road accident
09/09/2021

ಚಿಕ್ಕಮಗಳೂರು: ಸಹೋದರಿಗೆ ಬಾಗಿನ ನೀಡಿ, ತನ್ನ ಪುತ್ರಿಯೊಂದಿಗೆ ಮನೆಗೆ ವಾಪಸ್ ಆಗುತ್ತಿದ್ದ ಸಹೋದರ ಹಾಗೂ ಆತನ ಪುತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ  ಚಿಕ್ಕಮಗಳೂರಿನ ಉದ್ದೇಬೋರನಹಳ್ಳಿ ಬಳಿಯಲ್ಲಿ ನಡೆದಿದೆ.

58 ವರ್ಷ ವಯಸ್ಸಿನ ಜಯಣ್ಣ ಹಾಗೂ ಅವರ ಪುತ್ರಿ 19 ವರ್ಷ ವಯಸ್ಸಿನ ರಕ್ಷಿತಾ ಮೃತಪಟ್ಟವರು ಎಂದು ತಿಳಿದು ಬಂದಿದೆ. ಮುಗಳವಳ್ಳಿಯ ಜಯಣ್ಣ ದ್ವಿಚಕ್ರ ವಾಹನದಲ್ಲಿ ಪಿಳ್ಳೆನಹಳ್ಳಿಗೆ ತೆರಳಿ ಸಹೋದರಿಗೆ ಬಾಗಿನ ನೀಡಿ ವಾಪಸ್ ಆಗುವ ವೇಳೆ ಎಲ್ ಪಿಜಿ ಸಿಲಿಂಡರ್ ತುಂಬಿದ ಲಾರಿ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ತಂದೆ ಹಾಗೂ ಪುತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ತೀವ್ರತೆಗೆ ಲಾರಿಯು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಕೆಲಕಾಲ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ. ಇನ್ನೂ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು, ಸಖರಾಯಪಟ್ಟಣ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಸುದ್ದಿಗಳು…

ಪೊಲೀಸ್ ಅಧಿಕಾರಿಯ ಜೇಬಿಗೆ ಕೈ ಹಾಕಿ ಚಿನ್ನದ ಬಳೆ ಕದ್ದ ಕಳ್ಳ!

ಯಡಿಯೂರಪ್ಪನವರನ್ನು ಕೆಳಗಿಳಿಸಿದ ಫಲವನ್ನು ಇವರೆಲ್ಲ ಉಣ್ಣುತ್ತಾರೆ ನೋಡಿ | ಕೋಡಿ ಶ್ರೀಗಳಿಂದ ಸಸ್ಪೆನ್ಸ್, ಥ್ರಿಲ್ಲರ್ ಭವಿಷ್ಯ!

ದಂಪತಿಯನ್ನು ಅಡ್ಡಗಟ್ಟಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಚಿನ್ನಾಭರಣ ದೋಚಿದ ದರೋಡೆಕೋರರು

ಚೌತಿಗೂ ಮೊದಲೇ ಬಿಬಿಎಂಪಿ ಕಚೇರಿ ಆವರಣಕ್ಕೆ ಬಂದ ಗಣಪ! |  ಗಣೇಶೋತ್ಸವಕ್ಕೆ ನಿರ್ಬಂಧದ ವಿರುದ್ಧ ಪ್ರತಿಭಟನೆ

ಜಾತಿ ತಾರತಮ್ಯ ನಿರ್ಮೂಲನೆ ಮಾಡುವ ಗ್ರಾಮಕ್ಕೆ 10 ಲಕ್ಷ ರೂಪಾಯಿ ಬಹುಮಾನ!

ವಿದ್ಯುತ್ ಚಾಲಿತ ವಾಹನ ಬಳಸಿದರೆ, ಪೆಟ್ರೋಲ್ ಬೆಲೆ ಇಳಿಯುತ್ತದೆ | ಸಚಿವ ನಾರಾಯಣ ಗೌಡ

ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ ಗೆ ಲಾರಿ ಡಿಕ್ಕಿ: ನಾಲ್ವರು ಮಹಿಳೆಯರು ಸಾವು, 15 ಮಂದಿಗೆ ಗಾಯ

ಇತ್ತೀಚಿನ ಸುದ್ದಿ