ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ಹೋಗಿದ್ದೆ | ಪ್ರಧಾನಿ ಮೋದಿ ಹೇಳಿಕೆ
27/03/2021
ಢಾಕಾ: ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ನಡೆಸಿದ್ದು ತನ್ನ ಜೀವನದ ಮೊದಲ ಪ್ರತಿಭಟನೆಗಳಲ್ಲಿ ಒಂದಾಗಿತ್ತು. ಈ ಪ್ರತಿಭಟನೆಯಲ್ಲಿ ನಾನು ಜೈಲಿಗೆ ಹೋಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಾಂಗ್ಲಾದೇಶಕ್ಕೆ ಶುಕ್ರವಾರ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ಬಾಂಗ್ಲಾದೇಶದ 50ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ದೇಶದ ಜನತೆಗೆ ಅಭಿನಂದನೆ ಸಲ್ಲಿಸಿದರು.
ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟವು ನನ್ನ ಬದುಕಿನ ಪಯಣದಲ್ಲಿಯೂ ಮಹತ್ವದ ಘಳಿಗೆಯಾಗಿತ್ತು. ಭಾರತದಲ್ಲಿ ನಾನು ಮತ್ತು ನನ್ನ ಸಹೋದ್ಯೋಗಿಗಳು ಸತ್ಯಾಗ್ರಹ ನಡೆಸಿದ್ದೆವು . ನಾನಾಗ 20ರ ಹರೆಯದಲ್ಲಿದ್ದೆ. ಇದಕ್ಕಾಗಿ ನಾನು ಜೈಲಿಗೆ ಕೂಡ ಹೋಗಿದ್ದೆ ಎಂದು ಪ್ರಧಾನಿ ಮೋದಿ ಹೇಳಿದರು.
ಬಿಜೆಪಿ ಅವಿದ್ಯಾವಂತರ ಪಕ್ಷ | ಬಿಜೆಪಿ ಶಾಸಕನ ಹೇಳಿಕೆ ಬೆನ್ನಲ್ಲೇ ವ್ಯಂಗ್ಯಕ್ಕೀಡಾದ ಬಿಜೆಪಿ