ಆರು ತಿಂಗಳ ಅವಧಿಯ ಉದ್ಯೋಗ ವೀಸಾವನ್ನು ಘೋಷಿಸಿದ ಬಹರೈನ್

ಆರು ತಿಂಗಳ ಅವಧಿಯ ಉದ್ಯೋಗ ವೀಸಾವನ್ನು ಬಹರೈನ್ ಘೋಷಿಸಿದೆ. ಈಗಾಗಲೇ ಒಂದು ವರ್ಷ ಮತ್ತು ಎರಡು ವರ್ಷಗಳ ವೀಸಾ ಪರ್ಮಿಟ್ ಗಳು ಅಸ್ತಿತ್ವದಲ್ಲಿದ್ದು ಅದರ ಹೊರತಾಗಿ ಈ ಹೊಸ ವೀಸಾವನ್ನು ಪರಿಚಯಿಸಲಾಗಿದೆ. ಬಹರೈನ್ ನಲ್ಲಿ ವಾಸಿಸುತ್ತಿರುವ ವಿದೇಶಿಯರು ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಈ ಹೊಸ ವಿಸಾಕ್ಕೆ ಯೋಗ್ಯರಾಗಿದ್ದಾರೆ.
ಹೊಸ ವಿಸಾವು, ಈಗ ಬಹರೈನ್ ನಲ್ಲಿ ಇರುವ ವಿದೇಶಿ ಉದ್ಯೋಗಸ್ಥರಿಗೆ ಮಾತ್ರ ಅನ್ವಯವಾಗುತ್ತದೆ ಮತ್ತು ವಿದೇಶದಿಂದ ರಿಕ್ರೂಟ್ಮೆಂಟ್ ಆಗುವವರು ಇದರಲ್ಲಿ ಸೇರುವುದಿಲ್ಲ ಎಂದು ತಿಳಿಸಲಾಗಿದೆ. ಈ ಮೂಲಕ ಕಾರ್ಮಿಕರ ಕಾರ್ಯಕ್ಷಮತೆಯನ್ನು ಮತ್ತು ಕೆಲಸಕ್ಕೆ ಅವರ ಯೋಗ್ಯತೆಯನ್ನು ಪರಿಶೀಲಿಸಲು ಬಿಸಿನೆಸ್ ಕ್ಷೇತ್ರದ ಕಂಪೆನಿಗಳಿಗೆ ಇದರಿಂದ ಸುಲಭವಾಗಿದೆ. ಹಾಗೆಯೇ ಕಂಪನಿಗಳು ಹೆಚ್ಚು ಕ್ಷಮತೆ ಹೊಂದುವುದಕ್ಕೂ ಇದರಿಂದ ಸಾಧ್ಯವಾಗಲಿದೆ. ಇನ್ನಷ್ಟು ಮಾಹಿತಿಯನ್ನು ಪಡೆಯಲು ವೆಬ್ ಸೈಟ್ ಮೂಲಕ ಪ್ರಯತ್ನಿಸಬಹುದು ಎಂದು ತಿಳಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj