ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲದವರೆಗೆ ಪ್ರಧಾನಿಯಾಗಿದ್ದ ಬಹ್ರೈನ್ ನ ಪ್ರಧಾನಿ ನಿಧನ | ಹೊಸ ಪ್ರಧಾನಿಯ ನೇಮಕ - Mahanayaka

ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲದವರೆಗೆ ಪ್ರಧಾನಿಯಾಗಿದ್ದ ಬಹ್ರೈನ್ ನ ಪ್ರಧಾನಿ ನಿಧನ | ಹೊಸ ಪ್ರಧಾನಿಯ ನೇಮಕ

13/11/2020

ಮನಮಾ, ಬಹ್ರೇನ್:  ಬಹ್ರೈನ್ ನ ಪ್ರಧಾನ ಮಂತ್ರಿ  ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ನಿಧನರಾಗಿದ್ದು, ಈ ಸ್ಥಾನಕ್ಕೆ ಅವರ ತಮ್ಮನ ಪುತ್ರ  ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಲಾಗಿದೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಟೇಟ್ ನಲ್ಲಿ ಬಹ್ರೈನ್ ನ ಪ್ರಧಾನ ಮಂತ್ರಿ  ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಅವರು ನಿಧನರಾಗಿದ್ದಾರೆ.  ಬಹ್ರೇನ್ ಗೆ 1971ರಲ್ಲಿ ಸ್ವಾತಂತ್ರ್ಯ ಬಂದ ನಂತರ ಪ್ರಧಾನಿ ಹುದ್ದೆಯಲ್ಲಿದ್ದ ಷೇಕ್ ಖಲಿಫಾ ಅವರು, ವಿಶ್ವದಲ್ಲಿಯೇ ಅತೀ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿ ದಾಖಲೆ ಬರೆದಿದ್ದಾರೆ.

ಸುಮಾರು ಐದು ದಶಕಗಳ ಕಾಲ ಆಡಳಿತ ನಡೆಸಿದ್ದ ಮಂತ್ರಿ  ಷೇಕ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ ಬುಧವಾರ ನಿಧನರಾಗಿದ್ದರು. ಇವರ ಸ್ಥಾನಕ್ಕೆ ರಾಜಕುಮಾರ ಸಲ್ಮಾನ್ ಬಿನ್ ಅಲ್ ಖಲೀಫಾ ಅವರನ್ನು ನೇಮಕ ಮಾಡಲಾಗಿದೆ.

ಗೆಜೆಟ್ ಪ್ರಕಟಗೊಂಡ ಕೂಡಲೇ ರಾಯಲ್ ಆದೇಶ ಜಾರಿಗೆ ಬರಲಿದೆ. ನಂತರ ಫ್ರಿನ್ಸ್ ಸಲ್ಮಾನ್ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ