ತುಮಕೂರು: ಬಜರಂಗದಳದ ಬಂದ್ ಗೆ ತಡೆಯೊಡ್ಡಿದ ಬಿಜೆಪಿ | ಅಷ್ಟಕ್ಕೂ ನಡೆದ ಯಡವಟ್ಟೇನು?
ತುಮಕೂರು: ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಪರಿವಾರ ಇಡೀ ನಗರವನ್ನೇ ಬಂದ್ ಬಂದ್ ಮಾಡಿಸಿದ ಘಟನೆ ಇದೀಗ ತಿರುವು ಪಡೆದುಕೊಂಡಿದ್ದು, ಬಂದ್ ಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಬಂದ್ ನಡೆಸದಂತೆ ಬಿಜೆಪಿ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದು, ಈ ವೇಳೆ ಬಿಜೆಪಿ ಪರಿವಾರದ ಭಾಗವಾಗಿರುವ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರಕ್ಕೆ ನ್ಯಾಯಕೊಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬಂದ್ ಆಚರಿಸಲಾಗಿದೆ ಎನ್ನುವುದು ಬಿಜೆಪಿಗೆ ಮುಜುಗರವುಂಟು ಮಾಡಿದ್ದು, ಇದು ಸರ್ಕಾರದ ವಿರುದ್ಧದ ಪ್ರತಿಭಟನೆಯಾಗಿರುವುದರಿಂದ ಸರ್ಕಾರದ ಇಮೇಜ್ ಗೆ ಧಕ್ಕೆ ಬಂದಿದೆ ಎನ್ನಲಾಗಿದೆ. ಈ ಕಾರಣದಿಂದಾಗಿ ಬಂದ್ ನ್ನು ವಾಪಸ್ ಪಡೆದುಕೊಳ್ಳುವಂತೆ ಬಜರಂಗದಳದ ಮುಖಂಡರಿಗೆ ಸೂಚನೆ ನೀಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ಬಂದ್ ನಡೆದಿದೆ ಎನ್ನುವ ಸಂದೇಶ ಸಾರ್ವಜನಿಕರಿಗೆ ಹೋಗಿದ್ದು, ಈ ಕಾರಣಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೂರವಾಣಿ ಮೂಲಕ ಚರ್ಚೆ ನಡೆಸಿ ಸರ್ಕಾರದ ಇಮೇಜ್ ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಬಂದ್ ವಾಪಸ್ ಪಡೆಯುವಂತೆ ಬಜರಂಗದಳಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ ಬಿಜೆಪಿ ನಾಯಕರಾದ ತೇಜಸ್ವಿ ಸೂರ್ಯ ಸೇರಿದಂತೆ ಕಟೀಲ್, ಸಿ.ಟಿ.ರವಿ, ಪ್ರತಾಪ್ ಸಿಂಹ ಮೊದಲಾದವರು ತುಮಕೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
“ರತ್ನನ್ ಪ್ರಪಂಚ” ವರ್ಣಿಸಲು ಪದಗಳೇ ಇಲ್ಲ | ಒಂದು ಒಳ್ಳೆಯ ಸಿನಿಮಾ ನೋಡಿದೆ: ಹಾಸನದ ಯುವಕ ಸಚಿನ್ ಸರಗೂರು
ಮೋದಿಯಿಂದಾಗಿ ಕಾಂಗ್ರೆಸ್ ಧೂಳೀಪಟವಾಯ್ತು, ಇನ್ನೂ ಕಾಂಗ್ರೆಸ್ ನ ಅಡ್ರೆಸ್ಸೆ ಇರಲ್ಲ | ಯಡಿಯೂರಪ್ಪ ವಾಗ್ದಾಳಿ
ರಾಜ್ಯದಲ್ಲಿ 378 ಕೊವಿಡ್ ಪ್ರಕರಣ ಪತ್ತೆ: 11 ಮಂದಿ ಸಾವು
ಮಕ್ಕಳಿಗೆ ಕೊವಿಡ್ ಲಸಿಕೆ ಹಾಕಲು ಆತುರಬೇಡ: ತಜ್ಞರು ಹೀಗೆ ಹೇಳಿದ್ದೇಕೆ?
ಯಾವ ಸಾಧನೆಗೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ? | ಕೇಂದ್ರ ಸರ್ಕಾರದ ಕಿವಿ ಹಿಂಡಿದ ಸಿದ್ದರಾಮಯ್ಯ
ದಲಿತ ಬಾಲಕಿಯ ಅತ್ಯಾಚಾರ: ಆರೆಸ್ಸೆಸ್ ಮುಖಂಡನ ವಿರುದ್ಧ ದಲಿತ ಸಂಘಟನೆಗಳಿಂದ ಪ್ರತಿಭಟನೆ