“ಬಸ್ಸಿನಲ್ಲಿ ಓಡಾಡುತ್ತಿದ್ದ ಬಜರಂಗದಳದ ಕಾರ್ಯಕರ್ತ ಸಿ.ಟಿ.ರವಿ ಕೋಟಿ ರವಿ ಆಗಿದ್ದು ಹೇಗೆ?”
ಬೆಂಗಳೂರು: ಬೇನಾಮಿ ಆಸ್ತಿ ವಿಚಾರ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮರ ಆರಂಭವಾಗಿದೆ. ಡಿ.ಕೆ.ಶಿವಕುಮಾರ್ ಬೇನಾಮಿ ಆಸ್ತಿ ವಿಚಾರ ಜೀವಂತವಾಗಿರುವಾಗಲೇ ಇದೀಗ ರಾಜ್ಯ ಕಾಂಗ್ರೆಸ್ ಸಿ.ಟಿ.ರವಿ ಅವರ ಬೇನಾಮಿ ಆಸ್ತಿಯನ್ನು ಕೆದಕಿ, ಸಿ.ಟಿ.ರವಿ(C.T.Ravi) , ಕೋಟಿ ರವಿ, ಲೂಟಿ ರವಿ ಎಂದು ತಿರುಗೇಟು ನೀಡಿದೆ.
ಸಿ.ಟಿ.ರವಿ ವಿರುದ್ಧ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ಸಿ.ಟಿ.ರವಿ ಅವರೇ, 2004-2010ರ ಮಧ್ಯೆ ನಿಮ್ಮ ಆಸ್ತಿ ₹49 ಲಕ್ಷದಿಂದ ₹3.18 ಕೋಟಿಗೆ ಏರಿಕೆಯಾಗಿದೆ ಎಂಬ ದೂರು ದಾಖಲಾಗಿತ್ತು. 2018 ರಲ್ಲಿ ನೀವೇ ಘೋಷಿಸಿದ ಅಧಿಕೃತ ಆಸ್ತಿ ₹5 ಕೋಟಿಗೂ ಅಧಿಕ, ನಿಮ್ಮ ಕುಟುಂಬದ್ದು ಇನ್ನೂ ಅಧಿಕ, ಬೇನಾಮಿ ಅತ್ಯಧಿಕ! ಎಂದು ಕಾಂಗ್ರೆಸ್ ಹೇಳಿದೆ.
ಹಿಂದುತ್ವ ಜಪದಿಂದ ಈ ಪ್ರಮಾಣದ ಆಸ್ತಿ ಸಂಪಾದಿಸಬಹುದೇ ಲೂಟಿರವಿ ಅವರೇ? ಎಂದು ಸಿ.ಟಿ.ರವಿ ವಿರುದ್ಧ ಕಾಂಗ್ರೆಸ್ ಬೇನಾಮಿ ಆಸ್ತಿ ಆರೋಪ ಮಾಡಿದೆ.
ನಿಮ್ಮ ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ? ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಿದ್ದ ಅಂದಿನ ಬಜರಂಗದಳ ಕಾರ್ಯಕರ್ತ(Bajarangadal) ಇಂದಿನ ಫುಲ್ ಟೈಂ ರಾಜಕಾರಣಿ ಸಿಟಿ ರವಿ ಕೋಟಿ ರವಿ ಆಗಿದ್ದು ಹೇಗೆ? ಎಲ್ಲಿ, ಯಾರಿಂದ, ಎಷ್ಟೆಷ್ಟು ಕಲೆಕ್ಷನ್ ಮಾಡಿದಿರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಕೇರಳದಲ್ಲಿ ಮತ್ತೆ ಜಲಪ್ರಳಯದ ಭೀತಿ: ಬಿಟ್ಟು ಬಿಡದಂತೆ ಸುರಿಯುತ್ತಿದೆ ಭಾರೀ ಮಳೆ | ಮೂವರು ಬಲಿ
ನಾನೇ ಕಾಂಗ್ರೆಸ್ ನ ಪೂರ್ಣಾವಧಿ ಅಧ್ಯಕ್ಷೆ | ನಾಯಕತ್ವದ ಗೊಂದಲಕ್ಕೆ ತೆರೆ ಎಳೆದ ಸೋನಿಯಾ ಗಾಂಧಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ | ಏಮ್ಸ್ ಅಧಿಕಾರಿ ಮಾಹಿತಿ
ತ್ರಿಶೂಲ ದೀಕ್ಷೆ ನೀಡಿದ್ದೇವೆಯೇ ಹೊರತು ಬಾಂಬ್, ಗ್ರೆನೈಡ್ ಕೊಟ್ಟಿದ್ದಲ್ಲ | ಶರಣ್ ಪಂಪ್ ವೆಲ್
ಉಗ್ರಪ್ಪಗೆ ರಕ್ಷಣೆ ಸಲೀಂ ಅವರ ಉಚ್ಛಾಟನೆ: “ಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು” | ಕುಮಾರಸ್ವಾಮಿ ಕಿಡಿ
ಉಡುಪಿ: ‘ದುರ್ಗಾ ದೌಡ್’ ಮೆರವಣಿಗೆಯಲ್ಲಿ ಹಿಂದೂ ಜಾಗರಣ ಕಾರ್ಯಕರ್ತರಿಂದ ತಲವಾರು ಪ್ರದರ್ಶನ
ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ 89 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಕಳ್ಳರು!