ರಸ್ತೆ ಅವ್ಯವಸ್ಥೆಯ ವಿರುದ್ಧ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಧರಣಿ ಸತ್ಯಾಗ್ರಹ - Mahanayaka

ರಸ್ತೆ ಅವ್ಯವಸ್ಥೆಯ ವಿರುದ್ಧ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಧರಣಿ ಸತ್ಯಾಗ್ರಹ

bajpe
16/11/2023

ಬಜ್ಪೆ ಮುಖ್ಯ ರಸ್ತೆಯ ಕಳಪೆ ಕಾಮಗಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ  ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಬಜ್ಪೆ ಮುಖ್ಯ ರಸ್ತೆಯ ಕಳಪೆ ಕಾಮಗಾರಿಯಿಂದಾಗಿ ಇಲ್ಲಿನ ನಿಸರ್ಗ ಹೋಟೆಲ್ ಬಳಿ ಯಿಂದ ಚೆಕ್ ಪೋಸ್ಟ್ ತನಕ ಮುಂದುವರೆದ ಕಾಂಕ್ರಿಟ್ ರಸ್ತೆ ಮತ್ತು ಭಾರತ್ ಪೆಟ್ರೋಲ್ ಪಂಪ್ ನಿಂದ ಚರ್ಚ್ ಸೇತುವೆವರೆಗಿನ ರಸ್ತೆ ಅವ್ಯವಸ್ಥೆಯ ಗೂಡಾಗಿದೆ. ತಕ್ಷಣವೇ ಇಲ್ಲಿ ಚತುಷ್ಪಥ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ಸಮಿತಿಯು ಸತತ ಹೋರಾಟ ನಡೆಸುತ್ತಾ ಬಂದಿದೆ. ತಮ್ಮ‌ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ವೇದಿಕೆ ಧರಣಿ ಸತ್ಯಾಗ್ರಹ ನಡೆಸಿತು.

ಇದೇ ವೇಳೆ ಪ್ರತಿಭಟನೆಗೆ ಮಣಿದ PWD ಇಲಾಖೆ, ತುರ್ತಾಗಿ ಪ್ರತಿಭಟನಾಕಾರರ ಜೊತೆಗೆ ಮಾತುಕತೆಗೆ ಬಂದು ಎಲ್ಲಾ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರಲ್ಲದೇ ದೀಪಾವಳಿ ಹಬ್ಬ ಇರುವುದರಿಂದ ಕಾಮಗಾರಿ ಕೈಗೆತ್ತಿಕೊಳ್ಳಲು ಒಂದು ವಾರದ ಸಮಯ ಕೇಳಿದ್ದಾರೆ.  ದಿನಾಂಕ 20 /11/23 ರಂದು ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ವೇದಿಕೆಯ ಎಲ್ಲಾ ಪದಾಧಿಕಾರಿಗಳು ಮತ್ತು ವಿಶೇಷವಾಗಿ ಹಿರಿಯರ ಸಮ್ಮುಖದಲ್ಲಿ ಭರವಸೆ ಕೊಟ್ಟಿರುವುದರಿಂದ, ಧರಣಿ ಸತ್ಯಾಗ್ರಹ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ವೇದಿಕೆ ತಿಳಿಸಿದೆ.

ತುರ್ತು ಸಭೆಯಲ್ಲಿ ವೇದಿಕೆಯ ಸಂಚಾಲಕರಾದ ಸಿರಾಜ್ ಹುಸೇನ್ ಬಜ್ಪೆ ,ಸಹ ಸಂಚಾಲಕರಾದ ಇಂಜಿನಿಯರ್ ಇಸ್ಮಾಯಿಲ್ , ಹಿರಿಯರಾದ ರಾಜ್ಯ ದಲಿತ ಸಂಘರ್ಷ ಸಮಿತಿಯ ದೇವದಾಸ್, ಮೊನಕ , ಸಲೀಮ್ ಹಾಜಿ, ಮೊಯಿದಿನಕ, ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷರಾದ ನಿಸಾರ್ ಕರಾವಳಿ , ಗ್ರಾಮ ಕುಡುಂಬಿ ಸಮಾಜದ ಮುಖಂಡರಾದ ಶೇಖರ್ ಗೌಡ, SSF ಸಂಘಟನೆಯ ಮುಖಂಡರಾದ ಸಲೀಲ್ ಡಿಲಕ್ಸ್ , ಮುಫೀದ್ , ಹನೀಫ್ ಕಿನ್ನಿಪದವು , ದಲಿತ ಸಂಘರ್ಷ ಸಮಿತಿಯ ಮಂಜಪ್ಪ ಪುತ್ರನ್ , ಉದ್ಯಮಿ ಸಿದ್ದಿಕ್ , ಮನ್ಸೂರು ಕರಂಬಾರ್ , ಶೇಖರ್ ಎಕ್ಕಾರ್ , ಆಟೋ ಸಂಘಟನೆಯ ಭಾಸ್ಕರ್ ಮತ್ತು ಝಕೀರ್ , ದಲಿತ ಸಂಘಟನೆಯ ಲಕ್ಷ್ಮೀಶ್ , ಗ್ರಾ ಪಂ ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ಮತ್ತು PWD ಇಲಾಖೆಯ ಅಧಿಕಾರಿಗಳು ಮತ್ತು ನಾಗರಿಕ ಹಿತರಕ್ಷಣಾ ಸಮಿತಿಯ ಹಲವಾರು ನಾಯಕರು ಭಾಗವಹಿಸಿದರು ಎಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ  ಸಿರಾಜ್ ಬಜ್ಪೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ