ಪ್ರಚೋದನಾಕಾರಿ ಹೇಳಿಕೆ ನೀಡಿ ತಲೆಮರೆಸಿಕೊಂಡ ಬಜರಂಗದಳದ ಮುಖಂಡ!
ಸಕಲೇಶಪುರ: ಪ್ರಚೋದನಾಕಾರಿ ಭಾಷಣ ಮಾಡಿದ್ದ ಬಜರಂಗದಳದ ಮುಖಂಡ, ರೌಡಿಶೀಟರ್ ರಘುವಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದು, ಇದೇ ಸಂದರ್ಭದಲ್ಲಿ ರಘು ತಲೆಮರೆಸಿಕೊಂಡಿರುವ ಘಟನೆ ನಡೆದಿದೆ.
ಗೋಹತ್ಯೆಯನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಸಕಲೇಶಪುರ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ರೌಡಿಶೀಟರ್ ರಘು, ತರಕಾರಿ ಮೀನು ಮಾರಾಟ ಮಾಡಲು ಹಿಂದೂಗಳ ಮನೆಯ ಬಳಿ ಬರುವಂತಹ ಮುಸ್ಲಿಮ್ ವ್ಯಾಪಾರಿಗಳು ಎಚ್ಚರಿಕೆಯಿಂದಿರಿ, ಇಲ್ಲಾಂದ್ರೆ ನಮ್ಮಲ್ಲಿರುವ ಕೋವಿಯೊಳಗಿನ ಗುಂಡು ಹೊರ ಬರುತ್ತೆ, ನಾವು ಕೂಡ ಗುಂಡು ಹಾರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ.
ಜೊತೆಗೆ ಪ್ರಿಯಾಂಕ್ ಖರ್ಗೆಗೆ ನೇರವಾಗಿ ಸವಾಲು ಹಾಕಿದ್ದ ರಘು, ಆ ದಳ, ಈ ದಳ ಅಂತ ಹೇಳ್ಬೇಡಿ, ನಿಮ್ಗೆ ತಾಕತ್ತೇನಾದ್ರು ಇದ್ರೆ, ಬಜರಂಗದಳ ಅಂತ ಹೇಳಿ, ಆಗ ನಿಮಗೆ ನಾವು ಉತ್ತರ ಕೊಡ್ತೀವಿ… ಎಂದು ಹೇಳಿಕೆ ನೀಡಿದ್ದ.
ಈ ಪ್ರಚೋದನಾಕಾರಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಸಾಕಷ್ಟು ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿತ್ತು. ಇದೀಗ ಆರೋಪಿ ರಘುನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆನ್ನಲಾಗಿದೆ.
ಬಜರಂಗದಳದ ಮುಖಂಡ ಭಾಷಣದ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ: https://youtu.be/-0Rx89dFD-Q
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw