ಅಸ್ಪೃಶ್ಯರ ಮನೆಯ ಮುಂದಿರುವ ಮಡಕೆಯನ್ನು ಹೊಡೆದು ಹಾಕುವ ಭೀಮ | ಮಹಾನಾಯಕದಲ್ಲಿ ಬರಲಿದೆ ಅದ್ಭುತ ಭಾಗ
ಜೀ ಕನ್ನಡದಲ್ಲಿ ಸದ್ಯ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ದೇಶಾದ್ಯಂತ ಸಂಚಲನ ಮೂಡಿಸಿದೆ. ಸಂವಿಧಾನ ಶಿಲ್ಪಿ, ಪರಮಪೂಜ್ಯ ಡಾ.ಬಿ,ಆರ್.ಅಂಬೇಡ್ಕರ್ ಅವರು ಬಾಲ್ಯದಿಂದಲೇ ಹೋರಾಡುತ್ತ, ಸಮಾಜವನ್ನು ಹೇಗೆ ಬದಲಿಸುತ್ತ ಬಂದರು ಎನ್ನುವುದನ್ನು ಧಾರಾವಾಹಿಯಲ್ಲಿ ಸ್ವಾರಸ್ಯಕರವಾಗಿ ತೋರಿಸಲಾಗುತ್ತಿದೆ. ಇದೇ ಧಾರಾವಾಹಿಯಲ್ಲಿ ಬರುವ ಆ ಒಂದು ದೃಶ್ಯವಂತೂ, ಎದೆಯಲ್ಲಿ ಕಿಚ್ಚನ್ನು ಹುಟ್ಟಿಸುತ್ತದೆಯಂತೆ!
ಹೌದು…! ದುಷ್ಟ ಮನುಸ್ಮೃತಿಯ ಪ್ರಕಾರ ಅಸ್ಪೃಶ್ಯರು ಕುತ್ತಿಗೆಗೆ ಮಡಕೆ ಹಾಗೂ ಸೊಂಟಕ್ಕೆ ಪೊರಕೆ ಕಟ್ಟಿಕೊಂಡು ನಡೆಯುವಂತಹ ದುಸ್ಥಿತಿ ಇತ್ತು. ಅಸ್ಪೃಶ್ಯನ ಹೆಜ್ಜೆಯ ಗುರುತನ್ನೂ ಸ್ಪರ್ಶಿಸಬಾರದು, ಅಸ್ಪೃಶ್ಯ ಉಗುಳಿದರೆ, ಅದು ನೆಲಕ್ಕೆ ಬೀಳಬಾರದು ಎನ್ನುವ ನೀಚ ನಿಯಮವನ್ನು ಹೇರಲಾಗಿತ್ತು. ಹೀಗಾಗಿ ಇದನ್ನು ಅಸ್ಪೃಶ್ಯರು ಅನಿವಾರ್ಯವಾಗಿ ಪಾಲಿಸುತ್ತಿದ್ದರು. ಪಾಲಿಸದೇ ಹೋದರೆ, ಅಂತಹವರ ಮೇಲೆ ಭಯಂಕರವಾದ ಶಿಕ್ಷೆಯನ್ನು ನೀಡಲಾಗುತ್ತಿತ್ತು.
ಒಂದು ದಿನ ಬಾಲ ಭೀಮ ಇಂತಹದ್ದೊಂದು ದೃಶ್ಯವನ್ನು ನೋಡುತ್ತಾನೆ. ಮೊದಲೇ ಅಸಮಾನತೆಯ ಕಂಡಿದ್ದ ಬಾಲ ಭೀಮನಿಗೆ ಇಂತಹದ್ದೊಂದು ಕೆಟ್ಟ ನೀತಿ ಯಾಕೆ ಮಾಡಲಾಗಿದೆ ಎನ್ನುವುದು ತಿಳಿಯುತ್ತದೆ. ಆಗಲೇ ಭೀಮ ದೊಣ್ಣೆಯೊಂದನ್ನು ಎತ್ತಿಕೊಂಡು, ಅಸ್ಪೃಷ್ಯರ ಮನೆ ಬಳಿ ಇರಿಸಲಾಗಿದ್ದ ಎಲ್ಲ ಮಡಕೆಗಳನ್ನು ಹೊಡೆದು ಹಾಕುತ್ತಾನೆ. ಇದು ಸಾಂಕೇತಿಕವಾಗಿ ಧಾರಾವಾಹಿಯಲ್ಲಿ ತೋರಿಸಲಾಗಿದೆ. ಅಂದರೆ, ಈ ಮಡಕೆಯನ್ನು ಒಡೆದು ಹಾಕುವುದೆಂದರೆ, ಇದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಇಂತಹದ್ದ ಸಂಪ್ರದಾಯವನ್ನು ಭೀಮ ನಾಶ ಮಾಡುತ್ತಾನೆ ಎಂದೇ ಅರ್ಥ. ಜನರಲ್ಲಿ ಈ ಅಸ್ಪೃಶ್ಯತೆ ಎನ್ನುವ ಮಹಾ ಮೋಸದ ಬಗ್ಗೆ ಅರಿವು ಮೂಡಿಸುವ ಭೀಮ ಮಡಕೆಗಳನ್ನು ಹೊಡೆದು ಹಾಕುತ್ತಾನೆ. ಆಗಲೇ ಎಲ್ಲ ಅಸ್ಪೃಶ್ಯರು ತಾವು ಸೊಂಟಕ್ಕೆ ಕಟ್ಟಿಕೊಂಡಿದ್ದ ಪೊರಕೆಯನ್ನು ಬೆಂಕಿಗೆ ಹಾಕಿ ಸುಟ್ಟು ಹಾಕುತ್ತಾರೆ.