ಬಾಲಕ ಅಪಹರಣವಾಗಿದ್ದಾನೆಂದು ತಂದೆಯಿಂದಲೇ ಹೈಡ್ರಾಮಾ: ಸಿಸಿ ಕ್ಯಾಮರಾದಿಂದ ಬಯಲಾಯ್ತು ಕೃತ್ಯ
ಶಾಲೆಗೆ ತೆರಳಿದ್ದ 9 ವರ್ಷದ ಬಾಲಕ ಏಕಾಏಕಿ ನಾಪತ್ತೆಯಾಗಿ ಸ್ಥಳದಲ್ಲಿ ಹಾಗೂ ಶಾಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಮೂಲ್ಕಿಯ ಕಾರ್ನಾಡು ಎಂಬಲ್ಲಿ ನಡೆದಿದೆ.
ಹೆಜಮಾಡಿಯಿಂದ ಪ್ರತಿನಿತ್ಯ 9 ಗಂಟೆಗೆ ಕಾರ್ನಾಡ್ ಶಾಲೆಗೆ ಬಸ್ಸಿನಲ್ಲಿ ಬರುತ್ತಿದ್ದ 4 ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕ ಶಾಲೆ ಎದುರು ಭಾಗದಲ್ಲಿ ಬಸ್ಸಿನಲ್ಲಿ ಬಂದು ಇಳಿದಿದ್ದು ತತ್ ಕ್ಷಣ ಅಲ್ಲಿಗೆ ಆಟೋದಲ್ಲಿ ಆಗಮಿಸಿದ ಮಗುವಿನ ತಂದೆ ಹರೀಶ್ ಎಂಬಾತ ಮಗುವನ್ನು ಆಟೋದಲ್ಲಿ ಕುಳ್ಳಿರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಮತ್ತೆ ಅದೇ ಬಾಲಕನ ತಂದೆ ಆರೋಪಿ ಹರೀಶ್ ಶಾಲೆಗೆ ಬಂದು ನನ್ನ ಮಗು ಎಲ್ಲಿ? ಎಂದು ನಾಟಕ ಸೃಷ್ಟಿಸಿ ಮೂಲ್ಕಿ ಠಾಣೆಗೆ ದೂರು ನೀಡಲು ಹೋಗಿದ್ದಾನೆ. ಇತ್ತ ಮಗು ಶಾಲೆಯಲ್ಲಿ ನಾಪತ್ತೆಯಾದ ಬಗ್ಗೆ ಶಾಲೆಯಲ್ಲಿ ಹಾಗೂ ಕಾರ್ನಾಡು ಪೇಟೆಯಲ್ಲಿ ಆತಂಕದ ವಾತಾವರಣ ಏರ್ಪಟ್ಟು ಮಗುವಿನ ಆಪರಣದ ಬಗ್ಗೆ ವದಂತಿಗಳು ಸೃಷ್ಟಿಯಾಗಿದ್ದವು. ಕೂಡಲೇ ಸ್ಥಳಕ್ಕೆ ಮೂಲ್ಕಿ ನಗರ ಪಂಚಾಯತ್ ಸದಸ್ಯ ಪುತ್ತು ಬಾವಾ ಉತ್ತು ಮೂಲ್ಕಿ ಪೊಲೀಸರು ಆಗಮಿಸಿ ಶಾಲೆಯ ಬಳಿಯ ಕೇಶವ ಸುವರ್ಣ ಎಂಬವರ ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಮಗುವಿನ ತಂದೆ ಆರೋಪಿ ಹರೀಶ ಮಗುವನ್ನು ವಾಪಸ್ ಕರೆದುಕೊಂಡು ಹೋಗುವ ದೃಶ್ಯ ಕಂಡು ಬಂದು ಆತನ ಕೃತ್ಯ ಬಯಲಾಗಿದೆ.
ಕೂಡಲೇ ಸ್ಥಳಕ್ಕೆ ಮಗುವಿನ ತಂದೆ ಆರೋಪಿ ಹರೀಶ್ ನನ್ನು ಕರೆಯಿಸಿ ಮಗು ಎಲ್ಲಿ? ಎಂದು ಪ್ರಶ್ನಿಸಿದರೂ ಆತ ಬಾಯಿ ಬಿಡದೆ ಮತ್ತೆ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿ ತನಿಖೆ ನಡೆಸಿದಾಗ ಮಗುವಿಗೆ ಅನಾರೋಗ್ಯ ಉಂಟಾಗಿದ್ದು ಕೆರೆಕಾಡು ಎಂಬಲ್ಲಿರುವ ತನ್ನ ಮಿತ್ರನ ಮನೆಯಲ್ಲಿ ಮಗುವಿದೆ ಎಂಬ ಮಾಹಿತಿಯ ಅನ್ವಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮಗುವನ್ನು ರಕ್ಷಿಸಿದ್ದಾರೆ.
ಮಗುವಿನ ತಂದೆ ಹರೀಶ್ ಯಾಕಾಗಿ ಈ ರೀತಿ ನಾಟಕ ಆಡಿದ್ದಾನೆ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka