ಟ್ಯೂಷನ್ ಗೆ ಬರುತ್ತಿದ್ದ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡ 45ರ ಮಹಿಳೆ ! - Mahanayaka
7:43 AM Thursday 12 - December 2024

ಟ್ಯೂಷನ್ ಗೆ ಬರುತ್ತಿದ್ದ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡ 45ರ ಮಹಿಳೆ !

26/02/2021

ಲಕ್ನೋ: ನೆರೆಯ ಮನೆಯ ಶಿಕ್ಷಕನ ಮನೆಗೆ ಟ್ಯೂಷನ್ ಗೆ ಬರುತ್ತಿದ್ದ  ಬಾಲಕನನ್ನು ಮಹಿಳೆಯೋರ್ವಳು ಲೈಂಗಿಕವಾಗಿ ಬಳಸಿಕೊಂಡಿರುವ ಘಟನೆ ಉತ್ತರಪ್ರದೇಶದ ಸಿದ್ಧಾರ್ಥ ನಗರದಲ್ಲಿ ನಡೆದಿದೆ.

ಈ ಘಟನೆ ಮೊದಲು ನಡೆದದ್ದು 2016ರ ಜುಲೈನಲ್ಲಿ.  45 ವರ್ಷ ವಯಸ್ಸಿನ ಮೋಮಿನಾ  ಖತೂನ್ ಎಂಬ ಮಹಿಳೆ, ತನ್ನ ನೆರೆಯ ಮನೆಯ ಶಿಕ್ಷಕನ ಮನೆಗೆ ಬರುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಳು.  ಹೀಗೆ ಬಾಲಕನನ್ನು ನಿರಂತರವಾಗಿ ಈಕೆ ಲೈಂಗಿಕವಾಗಿ ಬಳಸಿಕೊಂಡಿದ್ದಳು. ಕಳೆದ ವರ್ಷ ಡಿಸೆಂಬರ್ ನಲ್ಲಿ ಕೊನೆಯ ಬಾರಿಗೆ ಈಕೆ ಹುಡುಗನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ.

2016ರಿಂದ 2020ರ ವರೆಗೆ ನಿರಂತರವಾಗಿ ಹುಡುಗನನ್ನು ಲೈಂಗಿಕವಾಗಿ ಆಕೆ ಬಳಸಿಕೊಂಡಿದ್ದಾಳೆ. ಇದೀಗ ಈ ಹುಡುಗ ಪದವಿ ಓದುತ್ತಿದ್ದಾನೆ. ಈ ಸಂದರ್ಭ ಮಹಿಳೆಯು ಗೂಂಡಾಗಳ ಪಡೆ ಕಟ್ಟಿಕೊಂಡು  ಹುಡುಗನ ಮನೆಗೆ ಬಂದಿದ್ದು, ಆತ ತನ್ನನ್ನು ಮದುವೆಯಾಗಬೇಕು ಎಂದು ಪೋಷಕರಿಗೆ ಬೆದರಿಕೆ ಹಾಕಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.

ತನ್ನನ್ನು ಆತ ಮದುವೆಯಾಗದಿದ್ದರೆ, ನಕಲಿ ಪ್ರಕರಣದಲ್ಲಿ ಬಾಲಕನನ್ನು ಸಿಲುಕಿಸುವುದಾಗಿ ಮಹಿಳೆ ಬೆದರಿಸಿದ್ದಾಳೆ. ಗೂಂಡಾಗಳಿಂದ ನಮಗೆ ಬೆದರಿಕೆ ಹಾಕಿಸಲಾಗುತ್ತಿದೆ ಎಂದು ಬಾಲಕನ ಕುಟುಂಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ