ತನ್ನ ಮಗಳಿಗಿಂತ ಹೆಚ್ಚು ಅಂಕ ಪಡೆದ ಬಾಲಕನಿಗೆ ಜ್ಯೂಸ್ ನಲ್ಲಿ ವಿಷ ಬೆರೆಸಿಕೊಂದ ಪಾಪಿ ಮಹಿಳೆ!

ಚೆನ್ನೈ: ಅಸೂಯೆ ಯಾರಿಗಿಲ್ಲ ಹೇಳಿ, ಪ್ರತಿಯೊಬ್ಬರೂ ಇನ್ನೊಬ್ಬರ ಬೆಳವಣಿಗೆಯನ್ನು ಕಂಡು ಉರಿದುಕೊಳ್ಳುವವರೇ ಸಮಾಜದಲ್ಲಿ ಕಾಣ ಸಿಗುತ್ತಾರೆ. ಆದರೆ, ಇಲ್ಲೊಬ್ಬಳು ಪಾಪಿ ಮಹಿಳೆ, ತನ್ನ ಅಸೂಯೆಯಿಂದ ಬಾಳಿ ಬದುಕಬೇಕಾದ ಬಾಲಕನ ಪ್ರಾಣವನ್ನೇ ಬಲಿ ಪಡೆದಿದ್ದಾಳೆ.
ತಮಿಳುನಾಡಿನ ಪುದುಚೇರಿಯಲ್ಲಿ ನಡೆದ ಘಟನೆಯೊಂದಲ್ಲಿ ತನ್ನ ಮಗಳಿಗಿಂತ ಹೆಚ್ಚು ಅಂಕ ಪಡೆದ ಬಾಲಕನೋರ್ವನಿಗೆ ಮಹಿಳೆಯೊಬ್ಬಳು ತಂಪು ಪಾನೀಯದಲ್ಲಿ ವಿಷ ಬೆರೆಸಿ ನೀಡಿದ್ದು, ಪಾನೀಯ ಕುಡಿದು ಅಸ್ವಸ್ಥನಾಗಿದ್ದ ಬಾಲಕ ಸಾವನ್ನಪ್ಪಿದ್ದಾನೆ.
ಪುದುಚೇರಿಯ ನ್ಯಾಯ ವಿಲಾ ಸ್ಟೋರ್ ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ರಾಜೇಂದ್ರ ಹಾಗೂ ಮಾಲತಿ ದಂಪತಿಯ ಎರಡನೇಯ ಮಗ ಬಾಲ ಮಣಿಕಂದನ್ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಮಣಿಕಂದನ್ 8ನೇ ತರಗತಿಯಲ್ಲಿ ಓದುತ್ತಿದ್ದು, ತನ್ನ ಸಹಪಾಠಿಯ ಮನೆಗೆ ಶಾಲಾ ವಾರ್ಷಿಕೋತ್ಸವದ ಅಭ್ಯಾಸಕ್ಕೆಂದು ತೆರಳಿದ್ದ, ಈ ವೇಳೆ ವಿದ್ಯಾರ್ಥಿನಿಯ ತಾಯಿ ತಂಪು ಪಾನೀಯದಲ್ಲಿ ವಿಷ ಬೆರೆಸಿ ಬಾಲಕನಿಗೆ ನೀಡಿದ್ದಾಳೆ ಎನ್ನಲಾಗಿದೆ.
ತನ್ನ ಮನೆಗೆ ಬಂದ ಬಾಲಕ ನಿರಂತರವಾಗಿ ವಾಂತಿ ಮಾಡಲು ಆರಂಭಿಸಿದಾಗ ಆತಂಕಗೊಂಡ ಪೋಷಕರು ತಕ್ಷಣವೇ ಕಾರೈಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಬಾಲ ಮಣಿಕಂದನ್ ತರಗತಿಯಲ್ಲಿ ಅಗ್ರಸ್ಥಾನ ಪಡೆದಿದ್ದ. ಆದರೆ ಮಹಿಳೆಯ ಪುತ್ರಿ ಎರಡನೇ ಸ್ಥಾನಪಡೆದುಕೊಂಡಿದ್ದಳು ಎನ್ನಲಾಗಿದೆ. ಈ ಅಸೂಯೆಯಿಂದ ಆರೋಪಿ ಮಹಿಳೆ ಸಹಾಯಮೇರಿ ವಿಕ್ಟೋರಿಯಾ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಘಟನೆಯ ನಂತರ ಸಹಾಯಮೇರಿ ವಿಕ್ಟೋರಿಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಿಂದ ರೊಚ್ಚಿಗೆದ್ದ ಮೃತ ಬಾಲಕ ಕುಟುಂಬಸ್ಥರು ಮಹಿಳೆಯ ಮನೆಯನ್ನು ಧ್ವಂಸಗೊಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka