ಅಪ್ರಾಪ್ತ ವಯಸ್ಸಿನ ಬಾಲಕನಿಂದ 3 ತಿಂಗಳ ಮಗುವಿನ ಮೇಲೆ ಅತ್ಯಾಚಾರ!
ಇಟಾ: ಮೂರು ತಿಂಗಳ ಮಗುವಿನ ಮೇಲೆ 17 ವರ್ಷದ ಬಾಲಕ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದ್ದು, ಮಗು ಅಳುತ್ತಿರುವುದನ್ನು ಕೇಳಿ ತಾಯಿ ಓಡಿ ಬಂದಿದ್ದು, ಈ ವೇಳೆ ಘಟನೆಯು ಬೆಳಕಿಗೆ ಬಂದಿದೆ.
ಮಗು ಜೋರಾಗಿ ಅಳುತ್ತಿದ್ದದ್ದು ಕೇಳಿ ತಾಯಿ ಬಂದು ನೋಡಿದಾಗ ಮಗುವಿನ ಖಾಸಗಿ ಅಂಗದಿಂದ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಆಕೆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದೀಗ ಮಗುವಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಬಳಿಕ ಆರೋಪಿಯು ತಲೆಮರೆಸಿಕೊಂಡಿದ್ದು, ಮಗುವಿನ ಪೋಷಕರು ನೀಡಿರುವ ದೂರಿನನ್ವಯ ಆರೋಪಿಯನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ ಎಂದು ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಉದಯಶಂಕರ್ ಸಿಂಗ್ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶಕ್ಕೆ | ಕಾಬುಲ್ ಗೆ ಪ್ರವೇಶಿಸಿ ವಶಕ್ಕೆ ಪಡೆದುಕೊಂಡ ಉಗ್ರರು
ಸ್ವಾತಂತ್ರ್ಯ ರಥ ತಡೆದು ಪ್ರತಿಭಟಿಸಿದ ಎಸ್ ಡಿಪಿಐ ಕಾರ್ಯಕರ್ತರು | ಸಾರ್ವರ್ಕರ್ ಫೋಟೋಗೆ ಬಳಸಿದ್ದಕ್ಕೆ ವಿರೋಧ
ಸಿದ್ದರಾಮಯ್ಯನವರ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂದ ಸಿ.ಟಿ.ರವಿ
ಸವರ್ಣೀಯರಿಂದ ಶೋಷಿತರಿಗೆ ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ | ಅಂಬೇಡ್ಕರ್ ಸೇನೆ
ಮೊಟ್ಟೆ ವಿಚಾರ: ಧ್ವಜಾರೋಹಣಕ್ಕೆ ಬಂದ ಸಚಿವೆ ಶಶಿಕಲಾ ಜೊಲ್ಲೆಗೆ ಮುತ್ತಿಗೆ ಹಾಕಿದ ಮಹಿಳೆಯರು!
ಎಸ್ ಸಿ-ಎಸ್ ಟಿಗಳ ಜಾತಿ ನಿಂದನೆ ಮಾಡಿದ ನಟಿ ಅರೆಸ್ಟ್: ಬಂಧನದ ವೇಳೆ ನಟಿಯಿಂದ ಹೈಡ್ರಾಮಾ