ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಬಾಲಕನಿಂದಲೇ ಅತ್ಯಾಚಾರ | ಬಾಲಕಿ ಗರ್ಭಿಣಿಯಾದಾಗ ಬೆಳಕಿಗೆ ಬಂದ ಘಟನೆ

28/02/2021

ಚೆನ್ನೈ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ನಡೆಸಿ ಆಕೆ ಗರ್ಭಿಣಿಯಾಗಲು ಕಾರಣವಾದ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಪೋಷಕರು ನೀಡಿದ ದೂರಿನನ್ವಯ ಈ ಕ್ರಮಕೈಗೊಳ್ಳಲಾಗಿದೆ.

ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಬಾಲಕ ಸಂತ್ರಸ್ತ ಬಾಲಕಿಯ ನೆರೆಮನೆಯ ವ್ಯಕ್ತಿಯಾಗಿದ್ದಾನೆ. ಶಾಲೆಗೆ ಹೋಗುವುದನ್ನೂ ಬಿಟ್ಟಿದ್ದ ಈತ ಲಾಕ್ ಡೌನ್ ಸಂದರ್ಭದಲ್ಲಿ ಬಾಲಕಿಯ ಕುಟುಂಬಸ್ಥರಿಗೆ ನೆರವು ನೀಡುತ್ತಿದ್ದ ಎಂದು ತಿಳಿದು ಬಂದಿದೆ.

ಈ ನಡುವೆ ಬಾಲಕಿಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಈತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳಿ ದೈಹಿಕವಾಗಿ ಬಳಸಿಕೊಂಡಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಾಲಕಿಯ ಮೇಲೆ ಈತ ಅತ್ಯಾಚಾರ ಎಸಗಿದ್ದ ಎಂದು ಪೋಷಕರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಬಾಲಕಿಯು ಮನೆಯಲ್ಲಿ ಏಕಾಏಕಿ ತಲೆ ಸುತ್ತಿ ಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗರ್ಭಿಣಿ ಎಂದು ತಿಳಿದು ಬಂದಿದೆ. ಈ ವೇಳೆ ಪೋಷಕರು ಬಾಲಕಿಯ ಬಳಿ ವಿಚಾರಿಸಿದಾಗ ಬಾಲಕನ ಕೃತ್ಯ ಬಯಲಾಗಿದೆ.

ಬಾಲಕನ ವಿರುದ್ಧ ಸದ್ಯ ಪೋಕ್ಸೋ ಕಾಯ್ದೆ ದಾಖಲಿಸಿ, ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದ್ದು, ಬಳಿಕ ಪರಿಹಾರ ಶಾಲೆಗೆ ಕಳುಹಿಸಲಾಗಿದೆ.

whatsapp

ಇತ್ತೀಚಿನ ಸುದ್ದಿ

Exit mobile version