ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಮದ್ರಸಾ ಶಿಕ್ಷಕ ಬಂಧನ
ಮಲಪ್ಪುರಂ: 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಮದ್ರಸ ಶಿಕ್ಷಕನನ್ನು ಬಂಧಿಸಲಾಗಿದೆ.
ಕಪ್ಪುಪರಂಬು ನಿವಾಸಿ ಮೊಹಮ್ಮದ್ ಆಶಿಕ್ (38) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಎಸ್ ಐ ಸಿ.ಕೆ.ನೌಶಾದ್ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
2018ರ ಮೇ ತಿಂಗಳಲ್ಲಿ ಬಾಲಕಿ ತನ್ನ ಮದ್ರಸಾ ಅಧ್ಯಯನದ ಭಾಗವಾಗಿ ಪರೀಕ್ಷೆಗೆ ಹಾಜರಾಗಲು ಆರೋಪಿಯ ಮನೆಯಲ್ಲಿ ತಂಗಿದ್ದಾಗ ಹಲವು ದಿನಗಳ ಕಾಲ ಆರೋಪಿ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದ್ದು, ಮಾತ್ರವಲ್ಲದೇ ಸಂತ್ರಸ್ತೆಯ ಸಹೋದರರಿಗೂ ಕಿರುಕುಳ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ದೂರಿನ ಮೇರೆಗೆ ಪೆರಿಂತಲ್ಮಣ್ಣ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಹಿಂದೆ ನಮನ್ನಾರ್ಕ್ಕಾಡ್ ಪೊಲೀಸರು ದಾಖಲಿಸಿದ್ದ ಪ್ರಕರಣವನ್ನು ಇತ್ತೀಚೆಗೆ ಪೆರಿಂತಲ್ಮಣ್ಣಕ್ಕೆ ವರ್ಗಾಯಿಸಲಾಗಿತ್ತು. ತನಿಖೆಯ ವೇಳೆ ಆರೋಪಿಯನ್ನು ಕಪ್ಪುಪರಂಬದಲ್ಲಿರುವ ಆತನ ಮನೆಯಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
32 ವರ್ಷಗಳ ಜೈಲು ಶಿಕ್ಷೆಯ ಬಳಿಕ ರಾಜೀವ್ ಗಾಂಧಿ ಹತ್ಯೆಯ ಅಪರಾಧಿ ಪೆರಾರಿವಾಲನ್ ಬಿಡುಗಡೆ
ಟೆಸ್ಟ್ ಡ್ರೈವ್ ಮಾಡಿ ಬರುತ್ತೇನೆಂದು ಹೋದವ ಕಾರಿನೊಂದಿಗೆ ಪರಾರಿ!: ಶೋರೂಂ ಸಿಬ್ಬಂದಿ ಕಂಗಾಲು
ಮೇಡಂ ನನಗೊಂದು ಮದುವೆ ಮಾಡಿಸಿ: ವೃದ್ಧನ ಬೇಡಿಕೆ ಕೇಳಿ ಸಚಿವೆ ಕಂಗಾಲು
‘ಕೆಜಿಎಫ್ ಚಾಪ್ಟರ್ 2’ ಇನ್ನು ಅಮೆಜಾನ್ ಪ್ರೈಮ್ ನಲ್ಲಿ ಬಾಡಿಗೆಗೆ ಲಭ್ಯ