ಶಾಲಾ ಬಾಲಕಿಯ ಮೇಲೆಯೇ ಹರಿದ ಬಸ್: ಬಾಲಕಿ ಸ್ಥಳದಲ್ಲೇ ಸಾವು
ಬೆಂಗಳೂರು: ಶಾಲಾ ಬಸ್ ವೊಂದು ಬಾಲಕಿಯ ಮೇಲೆ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯಲ್ಲಿ ನಡೆದಿದೆ.
ಹಾರೋಹಳ್ಳಿ ನಿವಾಸಿ 16 ವರ್ಷ ವಯಸ್ಸಿನ ಕೀರ್ತನಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಸ್ನೇಹಿತರ ಜತೆ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ರಸ್ತೆಗೆಸೆಯಲ್ಪಟ್ಟ ಬಾಲಕಿಯ ಮೇಲೆಯೇ ಹರಿದಿದ್ದು, ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ. ಡೆಲ್ಲಿ ಪಬ್ಲಿಕ್ ಶಾಲೆ ಬಸ್ ಬಾಲಕಿಯ ಮೇಲೆ ಹರಿದ ಬಸ್ ಎನ್ನಲಾಗಿದೆ. ಘಟನೆ ಸಂಬಂಧ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಊಟ ಇಲ್ಲ ಎಂದಿದ್ದಕ್ಕೆ ಹೊಟೇಲ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಮಗನ ತಪ್ಪಿನಿಂದ 3.30 ಲಕ್ಷ ರೂಪಾಯಿ ದಂಡ ಪಾವತಿಸಿದ ತಂದೆ!
ಆರೆಸ್ಸೆಸ್, ಬಿಜೆಪಿ ಮೊದಲು ಕೈ ಹಾಕುವುದು ಶಿಕ್ಷಣ, ಇತಿಹಾಸದ ಕುತ್ತಿಗೆಗೆ: ದೇವನೂರು ಮಹದೇವ
ಮಹಿಳೆಯನ್ನು ಇರಿದು ಕೊಂದ ಕುರಿಗೆ ಮೂರು ವರ್ಷಗಳ ಜೈಲು ಶಿಕ್ಷೆ!
ಮಸೀದಿಯಲ್ಲಿ ದೈವ ಸಾನಿಧ್ಯ ಇತ್ತು: ತಾಂಬೂಲ ಪ್ರಶ್ನೆಯಲ್ಲಿ ಜ್ಯೋತಿಷ್ಯ ಗೋಪಾಲಕೃಷ್ಣ ಪಣಿಕ್ಕರ್