ಬಾಲಕಿಗೆ ಕಿರುಕುಳ; ತಡೆಯಲು ಯತ್ನಿಸಿದಾಗ ಆಕೆಯ ಮುಖಕ್ಕೆ ಇರಿದ ದುಷ್ಟ!

uttar pradesh
13/07/2021

ಬಲ್ಲಿಯಾ:  ಉತ್ತರ ಪ್ರದೇಶದಲ್ಲಿ ಆಡಳಿತ ಯಂತ್ರ ಕುಸಿದಿದೆ ಎನ್ನುವ ವರದಿಯ ನಡುವೆಯೇ  ಅಪರಾಧ ಪ್ರಕರಣಗಳು ಭಾರೀ ಮಟ್ಟದಲ್ಲಿ ಏರಿಕೆಯಾಗಿದೆ. ಇದೀಗ ಇನ್ನೊಂದು ಸುದ್ದಿ ದೇಶದಾದ್ಯಂತ ಸುದ್ದಿಯಾಗಿದೆ.

ವ್ಯಕ್ತಿಯೋರ್ವ ಬಾಲಕಿಯ ಮನೆಗೆ ನುಗ್ಗಿ ಕಿರುಕುಳ ನೀಡಿದ್ದು, ಈ ವೇಳೆ ಬಾಲಕಿ ಪ್ರತಿಭಟಿಸಿದಾಗ ಆಕೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ಬನ್ ಸಿದ್ಃ ರೋಡ್ ನಲ್ಲಿ ಈ ಘಟನೆ ನಡೆದಿದ್ದು, ಸೋಮವಾರ ನೆರೆಯ ಮನೆಯ ವ್ಯಕ್ತಿ ಬಾಲಕಿಯ ಮನೆಗೆ ನುಗ್ಗಿದ್ದು, ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಇದನ್ನು ತಡೆಯಲು ಯತ್ನಿಸಿದ ವೇಳೆ ಆರೋಪಿಯು ಬಾಲಕಿಯ ಮುಖಕ್ಕೆ ಇರಿದು ತೀವ್ರವಾದ ಗಾಯ ಉಂಟು ಮಾಡಿದ್ದಾನೆ.

ಬಾಲಕಿಯ ಮುಖಕ್ಕೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣವೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆ ಬಳಿಕ ವೈದ್ಯರ ಸಲಹೆಯ ಮೇರೆಗೆ ವಾರಣಾಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ತಂದೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version