ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗೆ ಪ್ರಮೋಷನ್! - Mahanayaka
5:22 PM Wednesday 11 - December 2024

ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿಗೆ ಪ್ರಮೋಷನ್!

police
20/05/2021

ಗುವಾಹಟಿ:  13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವಿರುವ ಐಪಿಎಸ್ ಅಧಿಕಾರಿಯೊಬ್ಬನನ್ನು ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ನೀಡಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

13 ವರ್ಷದ ಬಾಲಕಿಯ ಮೇಲೆ ಅಧಿಕಾರಿ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಈ ಸಂಬಂಧಿತ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಅಸ್ಸಾಂನ ಕಮ್ರೂಪ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಆರೋಪಿಯನ್ನು  ನೇಮಕ ಮಾಡಲಾಗಿದೆ.

2019ರ ಡಿಸೆಂಬರ್ 31ರಂದು ಪೊಲೀಸ್ ಅಧಿಕಾರಿಯ ಮನೆಯಲ್ಲಿ ಪಾರ್ಟಿ ನಡೆದಿದ್ದು, ಪಾರ್ಟಿ ವೇಳೆ ಮತ್ತೊಬ್ಬರು ಪೊಲೀಸ್ ಅಧಿಕಾರಿ ಕೂಡ ಭಾಗವಹಿಸಿದ್ದರು. ಅವರ 13 ವರ್ಷದ ಪುತ್ರಿಯ ಮೇಲೆ ಆರೋಪಿಯು ಲೈಂಗಿಕ ದೌರ್ಜನ್ಯ ನಡೆಸಿದ್ದ ಎಂದು ದೂರು ದಾಖಲಾಗಿತ್ತು. ಇದಕ್ಕೆ ಸಾಕಷ್ಟು ಪುರಾವೆಗಳು ಕೂಡ ಇವೆ.

ಅಸ್ಸಾಂ ಅಪರಾಧ ತನಿಖಾ ಇಲಾಖೆ ತನಿಖೆ ನಡೆಸಿ ಇವರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಸಾಕಷ್ಟು ಪುರಾವೆಗಳು ದೊರೆತಿವೆ ಎಂದು ಉಲ್ಲೇಖಿಸಿದೆ. ಲೈಂಗಿಕ ದೌರ್ಜನ್ಯದ ನಂತರ ಬಾಲಕಿ ಜರ್ಜರಿತಳಾಗಿದ್ದು, ಮಾನಸಿಕವಾಗಿ ಕುಗ್ಗಿ ಹೋಗಿರುವ ಬಗ್ಗೆಯೂ ತನಿಖಾ ಸಂಸ್ಥೆ ಚಾರ್ಜ್‌ಷೀಟ್‌ನಲ್ಲಿ ತಿಳಿಸಿತ್ತು. ಆದರೆ, ಪ್ರಕರಣದ ತೀರ್ಪು ಬರುವ ಮೊದಲೇ ಆರೋಪಿಗೆ ಬಡ್ತಿ ನೀಡಲಾಗಿದೆ.

ಇನ್ನೂ ಈ ಸಂಬಂಧ ಹೇಳಿಕೆ ನೀಡಿರುವ ಅಸ್ಸಾಂ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಜ್ಯೋತಿ ವಿಷಯವನ್ನೂ ಕೋರ್ಟ್‌ನಲ್ಲಿ ಇದೆ. ಕೋರ್ಟ್‌ ತೀರ್ಪು ನೀಡಿ ಅಪರಾಧಿ ಎಂದು ಸಾಬೀತಾದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿ