ಬಾಲಕಿಗೆ ಮನೆ ಮಾಲಿಕನಿಂದ ಲೈಂಗಿಕ ಕಿರುಕುಳ | ಆರೋಪಿಯ ಬಂಧನ - Mahanayaka
5:21 PM Wednesday 11 - December 2024

ಬಾಲಕಿಗೆ ಮನೆ ಮಾಲಿಕನಿಂದ ಲೈಂಗಿಕ ಕಿರುಕುಳ | ಆರೋಪಿಯ ಬಂಧನ

crime news mangalore
26/08/2021

ಮಂಗಳೂರು: ಬಾಡಿಗೆ ಮನೆಯಲ್ಲಿದ್ದ ಬಾಲಕಿಗೆ ಮನೆ ಮಾಲಿಕನೋರ್ವ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು, ಬಾಲಕಿಯ ತಾಯಿ ನೀಡಿದ ದೂರಿನನ್ವಯ ಆರೋಪಿಯನ್ನು ಮಹಿಳಾ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪೆರ್ಮುದೆ ನಿವಾಸಿ ರಾಮಕೃಷ್ಣ  ಎಂಬಾತ ಬಂಧಿತ ಆರೋಪಿಯಾಗಿದ್ದು, ಶಿವಮೊಗ್ಗ ಮೂಲದ ಮಹಿಳೆಯ 8 ವರ್ಷ ವಯಸ್ಸಿನ ಮಗಳ ಮೇಲೆ ಈತ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಆಗಸ್ಟ್ 21ರಂದು ತುರ್ತು ಕೆಲಸಕ್ಕಾಗಿ ತಾಯಿಯು ಶಿವಮೊಗ್ಗಕ್ಕೆ ತೆರಳಿದ್ದರು. ಈ ವೇಳೆ ಅವರ ಮೂವರು ಮಕ್ಕಳು ಬಾಡಿಗೆ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ.

ಶಿವಮೊಗ್ಗಕ್ಕೆ ತೆರಳುವ ಮೊದಲು ಮನೆ ಮಾಲಿಕ ರಾಮಕೃಷ್ಣನ ಪತ್ನಿ ಬಳಿ ತಾಯಿಯು, ತನ್ನ ಮಕ್ಕಳನ್ನು ನೋಡಿಕೊಳ್ಳುವಂತೆ ಹೇಳಿದ್ದಳು ಎನ್ನಲಾಗಿದೆ.  ಆ ದಿನ ಸಂಜೆಯ ವೇಳೆಗೆ ರಾಮಕೃಷ್ಣನ ಪತ್ನಿ ಕಟ್ಟಿಗೆ ತರಲು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ 8 ವರ್ಷದ ಬಾಲಕಿ ಮತ್ತು ರಾಮಕೃಷ್ಣ ಮಾತ್ರವೇ ಮನೆಯಲ್ಲಿದ್ದು, ಈ ವೇಳೆ ಆರೋಪಿಯು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮರು ದಿನವೂ ಆರೋಪಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ನಡೆಸಲು ಯತ್ನಿಸಿದ್ದಾನೆ. ತಾಯಿಯು ಶಿವಮೊಗ್ಗದಿಂದ ಹಿಂದಿರುಗಿದಾಗ ಬಾಲಕಿಯು ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ್ದು, ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತ ಬಾಲಕಿಯ ತಾಯಿ ಈ ಸಂಬಂಧ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಇನ್ನಷ್ಟು ಸುದ್ದಿಗಳು…

ಇಂದಿರಾ ಕ್ಯಾಂಟೀನ್ ಗೆ ಅನ್ನಪೂರ್ಣೇಶ್ವರಿ ಎಂದು ನಾಮಕರಣ ಮಾಡಿದರೆ, ಗಂಟಲಲ್ಲಿ ಅನ್ನ ಇಳಿಯುವುದಿಲ್ಲವೇ | ಸಿ.ಟಿ.ರವಿ ಪ್ರಶ್ನೆ

ಟಾಲಿವುಡ್ ನಲ್ಲಿಯೂ ಡ್ರಗ್ಸ್ ವಾಸನೆ: ರಾಣಾ ದಗ್ಗುಬಾಟಿ ಸೇರಿದಂತೆ 12 ನಟ-ನಟಿಯರಿಗೆ ಇಡಿ ಸಮನ್ಸ್

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ರಾಜ್ಯ ಸರ್ಕಾರವನ್ನು ತರಾಟೆಗೆತ್ತಿಕೊಂಡ ಸಿದ್ದರಾಮಯ್ಯ

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಘಟನೆಯನ್ನು ವಿವರಿಸಿದ ಸಂತ್ರಸ್ತ ವಿದ್ಯಾರ್ಥಿನಿಯ ಸ್ನೇಹಿತ

ಕ್ಯಾನ್ಸರ್ ಪೀಡಿತ ಮುಸ್ಲಿಮ್ ಮಹಿಳೆಯರಿಗೆ ನೀಡಲಾಗುವ ಸಹಾಯಧನ ಯೋಜನೆ ಹಿಂಪಡೆಯಬೇಕು, ಎಲ್ಲರಿಗೂ ಯೋಜನೆ ಜಾರಿಗೆ ತನ್ನಿ | ಯತ್ನಾಳ್ ಒತ್ತಾಯ

ಮಹಿಳೆಯರು ಮನೆಯಲ್ಲಿಯೇ ಇರಿ, ಇಲ್ಲವಾದರೆ ಉಗ್ರರು ನಿಮ್ಮನ್ನು ದುರುಪಯೋಗಪಡಿಸಿಕೊಳ್ಳಬಹುದು | ತಾಲಿಬಾನ್ ನಾಯಕ

ಇತ್ತೀಚಿನ ಸುದ್ದಿ