ಬಾಲಕಿಯನ್ನು ಅತ್ಯಾಚಾರ ಮಾಡಿ ಸಮೋಸ, 20 ರೂ. ಕೊಟ್ಟು ಕಳಿಸಿದ ಅಜ್ಜ ಮತ್ತು ಚಿಕ್ಕಪ್ಪ! - Mahanayaka
3:26 AM Wednesday 11 - December 2024

ಬಾಲಕಿಯನ್ನು ಅತ್ಯಾಚಾರ ಮಾಡಿ ಸಮೋಸ, 20 ರೂ. ಕೊಟ್ಟು ಕಳಿಸಿದ ಅಜ್ಜ ಮತ್ತು ಚಿಕ್ಕಪ್ಪ!

arrest
11/04/2021

ಭೋಪಾಲ್: ಬಾಲಕಿಯನ್ನು ಅಜ್ಜ ಮತ್ತು ಚಿಕ್ಕಪ್ಪನೇ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನ ಕೋಲಾರ್ ಪ್ರದೇಶದಲ್ಲಿ ನಡೆದಿದ್ದು, ಸಂತ್ರಸ್ತ ಬಾಲಕಿಯ 3 ವರ್ಷದ ಸಹೋದರನ ಕಣ್ಣ ಮುಂದೆಯೇ ಈ ಘಟನೆ ನಡೆದಿದೆ.

ಎಂಟು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.  ಸಂತ್ರಸ್ತ ಬಾಲಕಿ ಹಾಗೂ ಆಕೆಯ ತಮ್ಮನನ್ನು ಸಮೋಸ ಕೊಡಿಸುವುದಾಗಿ ಆಕೆಯ ಚಿಕ್ಕಪ್ಪನೇ ಕರೆದುಕೊಂಡು ಹೋಗಿದ್ದಾನೆ. ಮನೆಯೊಂದಕ್ಕೆ ಕರೆದುಕೊಂಡು ಹೋದ ವೇಳೆ ಕೋಣೆಯಲ್ಲಿ ಬಾಲಕಿಯ ಅಜ್ಜ ಕೂಡ ಇದ್ದು, ಇವರಿಬ್ಬರೂ ಸೇರಿ 3 ವರ್ಷದ ಬಾಲಕನ ಎದುರೇ ಸಂತ್ರಸ್ತ ಬಾಲಕಿಯನ್ನು ಅತ್ಯಾಚಾರ ನಡೆಸಿದ್ದಾರೆ.

ಅತ್ಯಾಚಾರದ ಪರಿಣಾಮ ಬಾಲಕಿಗೆ ತೀವ್ರ ರಕ್ತಸ್ರಾವವಾಗಿದೆ.  ಇದನ್ನು ಗಮನಿಸಿದ ಅತ್ಯಾಚಾರಿಗಳು, ಮನೆಯಲ್ಲಿ ಈ ವಿಚಾರ ತಿಳಿಸ ಬಾರದು ಎಂದು ಬಾಲಕಿಗೆ ಸಮೋಸ ಹಾಗೂ 20 ರೂಪಾಯಿ ಕೊಟ್ಟು ಮನೆಗೆ ಕಳುಹಿಸಿದ್ದಾರೆ.

ಇತ್ತ ಮನೆಗೆ ಬಂದ ಬಾಲಕಿಯ ನಡವಳಿಕೆಯಲ್ಲಿ ವ್ಯತ್ಯಾಸವಾಗಿತ್ತು. ಆಕೆ ಯಾವಾಗಲೂ ಬಹಳ ನೊಂದುಕೊಂಡು ಇರುತ್ತಿದ್ದಳು. ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ಬಾಲಕಿಯ ನಡವಳಿಕೆಗಳು ಬದಲಾಗಿರುವುದನ್ನು ಗಮನಿಸಿದ ತಾಯಿ ಆಕೆಯನ್ನು ಈ ವಿಚಾರವಾಗಿ ವಿಚಾರಿಸಿದಾಗ ಬಾಲಕಿಯು ನಡೆದ ವಿಚಾರವನ್ನು ತಿಳಿಸಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ತಾಯಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಕೊಲಾರ್ ಪೊಲೀಸರು ಸಂತ್ರಸ್ತೆಯ ತಾಯಿ ಅಜ್ಜ ಮತ್ತು ಚಿಕ್ಕಪ್ಪ ಸಂಜಯ್ ಎಂಬಾತನನ್ನು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ