ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ - Mahanayaka
12:16 AM Tuesday 4 - February 2025

ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ

mangalore rape case
24/11/2021

ಮಂಗಳೂರು: ನಗರದ ಹೊರ ವಲಯದ ಉಳಾಯಿಬೆಟ್ಟು ಟ್ರೈಲ್ಸ್ ಫ್ಯಾಕ್ಟರಿಯಲ್ಲಿ  ಕೆಲಸಕ್ಕಿದ್ದ ಜಾರ್ಖಂಡ್ ಮೂಲದ ಕುಟುಂಬದ 8 ವರ್ಷ ವಯಸ್ಸಿನ ಬಾಲಕಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಹತ್ಯೆಗೂ ಮುನ್ನ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.

ಜಯಸಿಂಗ್,  ಮುಖೇಶ್ ಸಿಂಗ್, ಮನೀಶ್ ತಿರ್ಕಿ ಹಾಗೂ ಮುನೀಮ್ ಸಿಂಗ್ ಬಂಧಿತ ಆರೋಪಿಗಳಾಗಿದ್ದು, ಇವರ ಪೈಕಿ ಮೂವರು ಮಧ್ಯಪ್ರದೇಶ ಮೂಲದವರಾಗಿದ್ದು, ಓರ್ವ ಜಾರ್ಖಂಡ್ ರಾಜ್ಯದವನು ಎಂದು ತಿಳಿದು ಬಂದಿದ್ದು, ಆರೋಪಿಗಳೆಲ್ಲರೂ ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ.

ಭಾನುವಾರ ಮಧ್ಯಾಹ್ನ ಬಾಲಕ ಆಟವಾಡುತ್ತಿದ್ದ ವೇಳೆ ಆರೋಪಿಗಳು ಅದೇ ಕಾರ್ಖಾನೆಯ ಆವರಣದಲ್ಲಿದ್ದ ರೂಮ್ ಗೆ ಬಾಲಕಿಯನ್ನು ಕರೆದೊಯ್ದು ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಪರಿಣಾಮವಾಗಿ ಬಾಲಕಿ ತೀವ್ರ ರಕ್ತಸ್ರಾವಗೊಂಡು ಅಸ್ವಸ್ಥಳಾಗಿದ್ದು, ಜೋರಾಗಿ ಕಿರುಚಾಡಿದ್ದಾಳೆ ಎನ್ನಲಾಗಿದೆ. ಈ ವೇಳೆ  ಓರ್ವ ಬಾಲಕಿಯ ಕತ್ತು ಕಿಸುಕಿ ಹತ್ಯೆ ಮಾಡಿದ್ದು, ಬಳಿಕ ನೀರು ಹರಿಯುತ್ತಿರುವ ಚರಂಡಿಗೆ ಮೃತದೇಹವನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಾಕ್ ನೀಡಿದ ಪಾರ್ಲೆ—ಜಿ: ಪಾರ್ಲೆ ಉತ್ಪನ್ನಗಳ ಬೆಲೆ ಏರಿಕೆ

ಕೇರಳದಲ್ಲಿ ಬಿಜೆಪಿ ತಳವೂರಲು ಅವಕಾಶ ಕೊಡುವುದಿಲ್ಲ | ಶೈಲಜಾ ಟೀಚರ್

ಆಟೋ ತಡೆದು ಸಹೋದರರ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ ದುಷ್ಕರ್ಮಿಗಳು

ಬಡ ಹೆಣ್ಣು ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿ ಕೊಲೆ: ಮೌನಕ್ಕೆ ಶರಣಾದ ಮಂಗಳೂರಿನ ಸಂಘಟನೆಗಳು

ಪೊಲೀಸ್ ಠಾಣೆಯಿಂದ ಮನೆಗೆ ಬಂದ ಯುವತಿ ಆತ್ಮಹತ್ಯೆಗೆ ಶರಣು | ಪೊಲೀಸ್ ಠಾಣೆಯಲ್ಲಿ ನಡೆದದ್ದೇನು?

ಕರ್ನಾಟಕದಾದ್ಯಂತ ದೊರೆತ ಭಾರೀ ಬೆಂಬಲಕ್ಕೆ ಮನತುಂಬಿ ಪತ್ರ ಬರೆದ ನಾದ ಬ್ರಹ್ಮ ಹಂಸಲೇಖ

ಇತ್ತೀಚಿನ ಸುದ್ದಿ