ಕಾಮೋದ್ರೇಕಕಾರಿ ಮದ್ದು ನೀಡಿ ಯುವಕನಿಂದ ಅತ್ಯಾಚಾರ: ಬಾಲಕಿ ಸಾವು - Mahanayaka

ಕಾಮೋದ್ರೇಕಕಾರಿ ಮದ್ದು ನೀಡಿ ಯುವಕನಿಂದ ಅತ್ಯಾಚಾರ: ಬಾಲಕಿ ಸಾವು

madhyapradesh
06/12/2021

ಅನುಪ್ಪುರ್: ವ್ಯಕ್ತಿಯೋರ್ವ ಬಾಲಕಿಗೆ ಕಾಮೋದ್ರೇಕಕಾರಿ ಮದ್ದು ನೀಡಿ ಅತ್ಯಾಚಾರ ನಡೆಸಿದ್ದು, ಪರಿಣಾಮವಾಗಿ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಜೇಂದ್ರನಗರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರದಂದು ಈ ಘಟನೆ ನಡೆದಿದ್ದು, 17 ವರ್ಷ ವಯಸ್ಸಿನ ಬಾಲಕಿಗೆ ಕಾಮೋದ್ರೇಕಕಾರಿ ಮದ್ದು ನೀಡಿ ಅತ್ಯಾಚಾರ ಎಸಗಿದ್ದು, ಪರಿಣಾಮವಾಗಿ ವಿಪರೀತ ರಕ್ತಸ್ರಾವಗೊಂಡು ಬಾಲಕಿ ಸಾವನ್ನಪ್ಪಿದ್ದಾಳೆ.

22 ವರ್ಷ ವಯಸ್ಸಿನ ಆರೋಪಿ ಯಶವಂತ್ ಮರವಿ ಈ ಕೃತ್ಯ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ, ಸಾವಿಗೂ ಮುನ್ನ ತನ್ನ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾಳೆ ಎಂದು ವರದಿಯಾಗಿದೆ.

ಬಾಲಕಿಯು ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ. ಕೃತ್ಯದ ಬಳಿಕ ಆರೋಪಿ ಯಶವಂತ್ ಮರವಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಜೊತೆಗೆ ಆತನ ಸುಳಿವು ನೀಡಿದವರಿಗೆ 30 ಸಾವಿರ ರೂ. ಬಹುಮಾನವನ್ನೂ ಘೋಷಿಸಲಾಗಿದೆ ಎಂದು  ಡಿಜಿ ಸಾಗರ್ ತಿಳಿಸಿದ್ದಾರೆ.

ಇನ್ನೂ ಅತ್ಯಾಚಾರ ಆರೋಪಿಯನ್ನು ಇನ್ನೂ ಬಂಧಿಸದಿರುವುದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಯ ಬಂಧನ ವಿಳಂಬವನ್ನು ಪ್ರಶ್ನಿಸಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಸ್ಥಳೀಯ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಾಬಾಸಾಹೇಬ್ ಅಂಬೇಡ್ಕರ್ ರ ಕೊನೆಯ ಸಂದೇಶ

ಡಾ.ಬಿ.ಆರ್.ಅಂಬೇಡ್ಕರ್ ಮಹಾಪರಿನಿಬ್ಬಾಣ: ಸಿಎಂ ಬಸವರಾಜ್ ಬೊಮ್ಮಾಯಿ ಅವರಿಂದ ನಮನ

ಮಕ್ಕಳನ್ನು ಮನೆಯಲ್ಲಿಯೇ ಬಂಧಿಸಿದ ತಾಯಿ: ಮಕ್ಕಳ ಅಳು ಕೇಳಲಾರದೇ ಸ್ಥಳೀಯರಿಂದ ದೂರು

ಶಾಲಾ, ಕಾಲೇಜುಗಳಲ್ಲಿ ಕೊವಿಡ್ ಹೆಚ್ಚಳ: ಶಾಲಾ ಕಾಲೇಜುಗಳು ಮತ್ತೆ ಬಂದ್ ಆಗುತ್ತಾ?

ಪುನೀತ್ ರಾಜ್ ಕುಮಾರ್ ನಟನೆಯ ‘ಗಂಧದ ಗುಡಿ’ ಟೀಸರ್ ಬಿಡುಗಡೆ: ವಿಡಿಯೋ ನೋಡಿ

ಇತ್ತೀಚಿನ ಸುದ್ದಿ