5ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ; ಪ್ರಾಂಶುಪಾಲನಿಗೆ ಮರಣ ದಂಡನೆ, ಸಹ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ - Mahanayaka
8:19 PM Wednesday 11 - December 2024

5ನೇ ತರಗತಿಯ ಬಾಲಕಿಯ ಮೇಲೆ ಅತ್ಯಾಚಾರ; ಪ್ರಾಂಶುಪಾಲನಿಗೆ ಮರಣ ದಂಡನೆ, ಸಹ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ

16/02/2021

ಬಿಹಾರ(ಪಾಟ್ನಾ):  ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾ ಶಾಲೆಯೊಂದರ ಪ್ರಾಂಶುಪಾಲನಿಗೆ  ಮರಣ ದಂಡನೆ ಶಿಕ್ಷೆ ಹಾಗೂ ಸಹ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ನೀಡಿ ನ್ಯಾಯಾಲಯವು  ತೀರ್ಪು  ನೀಡಿದೆ.

ಪಾಟ್ನಾದಲ್ಲಿ 5ನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೋಕ್ಸೊ ನ್ಯಾಯಾಧೀಶ ಅವಧೇಶ್ ಕುಮಾರ್ ಅವರು ಸೋಮವಾರ ಹೊರಡಿಸಿದ ಆದೇಶದಲ್ಲಿ ಪ್ರಿನ್ಸಿಪಾಲ್ ಅರವಿಂದ ಕುಮಾರ್ ಗೆ ಮರಣದಂಡನೆ ಘೋಷಿಸಿದ್ದು, ಜೊತೆಗೆ 1 ಲಕ್ಷ ರೂ. ದಂಡವನ್ನೂ ವಿಧಿಸಿದರು. ಸಹ ಶಿಕ್ಷಕ ಅಭಿಷೇಕ್ ಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.

2018ರ ಸೆಪ್ಟಂಬರ್ ನಲ್ಲಿ  ಈ ಪ್ರಕರಣ ವರದಿಯಾಗಿತ್ತು. 11 ವಯಸ್ಸಿನ ಸಂತ್ರಸ್ತ ಬಾಲಕಿ  ಗರ್ಭಿಣಿಯಾಗಿದ್ದು, ಬಾಲಕಿ  ಅನಾರೋಗ್ಯಕ್ಕೆ ಒಳಗಾದಾಗ  ಬಾಲಕಿಯನ್ನು ಆಕೆಯ ಪೋಷಕರು ವೈದ್ಯರ ಬಳಿಗೆ ಕರೆದೊಯ್ದಿದ್ದು, ಆ ಬಳಿಕ ಘಟನೆ ಬೆಳಕಿಗೆ ಬಂದಿತ್ತು.

ಇತ್ತೀಚಿನ ಸುದ್ದಿ