ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕಿಯ ಮೇಲೆ ಬಿದ್ದ ಒಣಗಿದ ಮರ - Mahanayaka
2:12 AM Thursday 12 - December 2024

ನಡೆದುಕೊಂಡು ಹೋಗುತ್ತಿದ್ದ ವೇಳೆ ಬಾಲಕಿಯ ಮೇಲೆ ಬಿದ್ದ ಒಣಗಿದ ಮರ

26/02/2021

ಶಿವಮೊಗ್ಗ: ಒಣಗಿದ ಮರವೊಂದು ಬಾಲಕಿಯ ಮೇಲೆ  ಬಿದ್ದು ಮಗು ದಾರುಣವಾಗಿ ಸಾವನ್ನಪ್ಪಿರುವ ಘಟನೆ  ಜಿಲ್ಲೆಯ ಸಾಗರ ತಾಲೂಕಿನ ಚಿಪ್ಪಳಿ ಗ್ರಾಮದಲ್ಲಿ ನಡೆದಿದೆ. 5 ವರ್ಷದ ಬಾಲಕಿ ಸಂಜೆಯ ವೇಳೆ ಅಂಗಡಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಪ್ರತೀಕ್ಷಾ ಮೃತಪಟ್ಟ ಬಾಲಕಿಯಾಗಿದ್ದಾಳೆ.  ಬುಧವಾರ ಸಂಜೆ ಅಂಗಡಿಗೆ ಹೋಗುತ್ತಿದ್ದ ವೇಳೆ ಒಣಗಿ ನಿಂತಿದ್ದ ಮರ ಬಾಲಕಿಯ ಮೇಲೆ ಬಿದ್ದಿದೆ. ತಕ್ಷಣವೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

ಈ ಪ್ರದೇಶದಲ್ಲಿ ನೂರಾರು ಮರಗಳು ಒಣಗಿ ನಿಂತಿದ್ದು, ಇನ್ನಷ್ಟು ಬಲಿಗಳಾಗುವ ಮೊದಲು ಇವುಗಳನ್ನು ಕಡಿಯಿರಿ ಎಂದು ಈ ಘಟನೆಯ ಬೆನ್ನಲ್ಲೇ ಇಲ್ಲಿನ ನಿವಾಸಿಗಳು  ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ