ಕಬ್ಬಿನ ಗದ್ದೆಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ನಡೆಸಿ ಭೀಕರ ಹತ್ಯೆ - Mahanayaka
7:21 AM Thursday 12 - December 2024

ಕಬ್ಬಿನ ಗದ್ದೆಯಲ್ಲಿ 8 ವರ್ಷದ ಬಾಲಕಿಯ ಅತ್ಯಾಚಾರ ನಡೆಸಿ ಭೀಕರ ಹತ್ಯೆ

up news
22/06/2021

ಲಕ್ನೋ: ಕಬ್ಬಿನ ಗದ್ದೆಯಲ್ಲಿ 8 ವರ್ಷದ ಬಾಲಕಿಯ ಮೃತದೇಹವು ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಾಲಕಿಯ ಉಡುಪಿನಿಂದಲೇ ಕತ್ತು ಬಿಗಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಉತ್ತರಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಈ ಭೀಕರ ಘಟನೆ ನಡೆದಿದೆ. 8 ವರ್ಷದ ಬಾಲಕಿಯು ತನ್ನ ಅಜ್ಜಿಯ ಜೊತೆಗೆ ಆಡು ಮೇಯಿಸಲು ಗ್ರಾಮದ ಪಶ್ಚಿಮ ಭಾಗಕ್ಕೆ ಘಟನೆ ನಡೆದ ದಿನದಂದು ತೆರಳಿದ್ದರು.

ಮಧ್ಯಾಹ್ನದ ವೇಳೆ ಬಾಲಕಿಯು, ತನಗೆ ತೀವ್ರವಾಗಿ ದಣಿವಾಗುತ್ತಿದೆ. ನಾನು ಮನೆಗೆ ಹೋಗುತ್ತೇನೆ ಎಂದು ತೆರಳಿದ್ದಳು. ಅಜ್ಜಿ ಆಡುಗಳನ್ನು ಮೇಯಿಸಿದ ಬಳಿಕ ಸಂಜೆ ಮನೆಗೆ ಹಿಂದಿರುಗಿದಾಗ ಬಾಲಕಿ ಮನೆಗೆ ಬಂದಿಲ್ಲ ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ಮೊದಲೇ ಉತ್ತರ ಪ್ರದೇಶ ಅತ್ಯಾಚಾರಿಗಳ ಸ್ವರ್ಗವಾಗಿದ್ದು, ಇದರಿಂದ ಭೀತರಾದ ಮನೆಯವರು ಎಲ್ಲೆಡೆಯಲ್ಲಿ ಬಾಲಕಿಗಾಗಿ ಆತಂಕದಿಂದಲೇ ಹುಡುಕಾಡಿದ್ದಾರೆ. ಗ್ರಾಮಸ್ಥರಿಗೂ ಈ ವಿಚಾರ ತಿಳಿಸಿ ಬಾಲಕಿಯನ್ನು ಹುಡುಕಾಟ ನಡೆಸಿದಾಗ ಕಬ್ಬಿನ ಗದ್ದೆಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ರಕ್ತ ಸಿಕ್ತವಾಗಿದ್ದ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ಆದರ್ಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ದಲಿತ ಬಾಲಕಿಗೆ ಮದ್ಯ ಕುಡಿಸಿ, ವಿವಸ್ತ್ರಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯ ಬಿಟ್ಟ ಪಾಪಿಗಳು!

ಇತ್ತೀಚಿನ ಸುದ್ದಿ