ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ತಿರುವು! - Mahanayaka

ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ತಿರುವು!

kadaba
11/11/2021

ಕಡಬ: ಕೋಡಿಂಬಾಳ—ಮಡ್ಯಡ್ಕ ರಸ್ತೆಯಲ್ಲಿ ನವೆಂಬರ್ 9ರಂದು ಸಂಜೆ ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಘಟನೆ ಮತ್ತು ಬಾಲಕಿ ಹೆದರಿ ಓಡಿದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ.

ಕಡಬ ಪಟ್ಟಣ ಪಂಚಾಯತ್ ನಿಂದ ವಾರ್ಡ್ ವಿಂಗಡನೆಗೆ ಸಂಬಂಧಿಸಿದಂತೆ ಪಂಚಾಯತ್ ಸಿಬ್ಬಂದಿ ಜೆಪಿಎಸ್ ಕೆಲಸ ನಡೆಸುತ್ತಿದ್ದು, ನವೆಂಬರ್ 9ರಂದು ಸಂಜೆ ಕೋಡಿಂಬಾಳ ಗ್ರಾಮದ ಉಂಡಿಲ ಕ್ರಾಸ್ ಬಳಿ ಪಂಚಾಯತ್ ಸಿಬ್ಬಂದಿ ಜಿ.ಪಿ.ಎಸ್. ಮಾಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ ಇಳಿದಿದ್ದಾರೆನ್ನಲಾಗಿದೆ.

ಇದೇ ಸಮಯದಲ್ಲಿ ಬಾಲಕಿ ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದು, ಇವರು ಪಂಚಾಯತ್ ಸಿಬ್ಬಂದಿ ಎಂದು ತಿಳಿಯದೇ ಹೆದರಿ ಸ್ಥಳದಿಂದ ಓಡಿ ಹೋಗಿದ್ದಳು. ಈ ವಿಚಾರ ಸಿಬ್ಬಂದಿಯ ಗಮನಕ್ಕೂ ಬಂದಿದ್ದು, ಅವರು ಬಾಲಕಿಯ ಮನೆಗೆ ಹೋಗಿ ಅವರ ಪೋಷಕರಿಗೆ ವಿಚಾರ ತಿಳಿಸಿ, ಪೊಲೀಸರು ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ವಿದ್ಯಾರ್ಥಿನಿ ತಪ್ಪು ಗ್ರಹಿಕೆಯಿಂದ ಹಾಗೂ ಗಾಬರಿಯಿಂದ ಸ್ಥಳದಿಂದ ಓಡಿ ಹೋಗಿ ಮನೆಯಲ್ಲಿ ವಿಚಾರ ತಿಳಿಸಿದ್ದು, ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಸಿಬ್ಬಂದಿಗಳು ನೀಡಿರುವ ಮಾಹಿತಿಯಿಂದಾಗಿ ಅಸಲಿ ವಿಚಾರ ಬಹಿರಂಗವಾಗಿದೆ. ಏನೇ ಆಗಲಿ ಹೆಣ್ಣು ಮಕ್ಕಳು ಈ ರೀತಿಯಲ್ಲಿಯೇ ಎಚ್ಚರಿಯಿಂದ ಇರಬೇಕಾಗುತ್ತದೆ. ಅಪಾಯ ಎಂದು ಅನ್ನಿಸಿದರೆ, ಆ ಜಾಗದಿಂದ ಮೊದಲು ತಪ್ಪಿಸಿಕೊಳ್ಳಬೇಕು. ಈ ಘಟನೆಯಲ್ಲಿ ಬಾಲಕಿಯ ತಪ್ಪು  ಇಲ್ಲ. ಹೆಣ್ಣು ಮಕ್ಕಳು ಮೈಯೆಲ್ಲ ಕಣ್ಣಾಗಿರಬೇಕು ಎಂಬ ಮಾತುಗಳು ಇದೀಗ ಕೇಳಿ ಬಂದಿವೆ.

ಸಾಂದರ್ಭಿಕ ಚಿತ್ರ

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ನದಿಗೆ ಇಳಿದು ವಿಡಿಯೋ ಮಾಡುತ್ತಿದ್ದ ವೇಳೆ ಯುವಕ ನೀರುಪಾಲು! | ವಿಡಿಯೋ ವೈರಲ್

ದಲಿತ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ, ಇವರೆಲ್ಲ ಗಂಜಿ ಗಿರಾಕಿಗಳು | ಶಿವರಾಜ ತಂಗಡಗಿ ಕಿಡಿ

ನಾನು ಜೀವಂತವಿದ್ದೇನೆ: ತನ್ನ ಹತ್ಯೆಯ ವದಂತಿಯ ಬಗ್ಗೆ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ

ಮರಿ ಆನೆಗೆ “ಪುನೀತ್ ರಾಜ್ ಕುಮಾರ್” ಎಂದು ನಾಮಕರಣ ಮಾಡಿದ ಅರಣ್ಯ ಇಲಾಖೆ

ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್: ಹೊತ್ತಿ ಉರಿದ ಬಸ್ ನಲ್ಲಿದ್ದ 12 ಮಂದಿ ದಾರುಣ ಸಾವು

ಬಿಟ್ ಕಾಯಿನ್ ದಂಧೆ ಆರೋಪಿ ಬಿಡುಗಡೆ: ಜಾಮೀನು ಕೊಟ್ಟೋರು ಯಾರು?

“ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ” | ದೆಹಲಿಯಲ್ಲಾದ ಅನುಭವ ಹೇಳಿದ ವೃಕ್ಷಮಾತೆ ತುಳಸಿ ಗೌಡ

ಇತ್ತೀಚಿನ ಸುದ್ದಿ