ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ: ಮದ್ರಸ ಅಧ್ಯಾಪಕ ಅರೆಸ್ಟ್ - Mahanayaka
1:07 AM Wednesday 11 - December 2024

ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ: ಮದ್ರಸ ಅಧ್ಯಾಪಕ ಅರೆಸ್ಟ್

arrest
08/02/2022

ಪುತ್ತೂರು: ಮದ್ರಸದಲ್ಲಿ ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಮದ್ರಸ ಅಧ್ಯಾಪಕನನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕುಂಡಡ್ಕ ಸಂಶುಲ್ ಹುದಾ ಮದ್ರದ ಶಾಲೆಯ ಅಧ್ಯಾಪಕ ಎನ್ನಲಾಗಿರುವ ಉಸ್ತಾದ್ ಸಿರಾಜುದ್ದೀನ್ ಮದನಿ ಎಂಬಾತ ಬಂಧಿತ ಆರೋಪಿ ಎಂದು ವರದಿಯಾಗಿದೆ.

ಬಂಧಿಸಿದ ಬಳಿಕ ಆರೋಪಿಯನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಅಧ್ಯಾಪಕ ಲೈಂಗಿಕ ದೌರ್ಜನ್ಯ ಎಸಗುತ್ತಿರುವ ಬಗ್ಗೆ ವಿದ್ಯಾರ್ಥಿನಿಯರಿಬ್ಬರು ತಮ್ಮ ತಾಯಂದಿರಿಗೆ ತಿಳಿಸಿದ್ದು, ಅವರು ಪುತ್ತೂರು ಮಹಿಳಾ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ.

ಪೋಕ್ಸೊ ಕಾಯ್ದೆ ದಾಖಲಿಸಿಕೊಂಡ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದು, ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಇನ್ಸ್ ಪೆಕ್ಟರ್ ಎಂ.ಎನ್.ರಾವ್ , ಎಸ್ಸೈ ಸೇಸಮ್ಮ ಕಾರ್ಯಾಚರಣೆಯಲ್ಲಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪ್ರತಿಭಟನೆಯ ಬಳಿಕ ಕೇಸರಿ ಪೇಟ ರಾಶಿ ಹಾಕುತ್ತಿರುವ ದೃಶ್ಯ ವೈರಲ್!

ಹಿಜಬ್ ಹಾಕಿಕೊಂಡು ಅಧಿವೇಶನಕ್ಕಲ್ಲ ಮೊದಲು ಮಸೀದಿಗೆ ಹೋಗಿ: ಸಚಿವ ಈಶ್ವರಪ್ಪ

ನದಿಯಗೆ ಕೈ ತೊಳೆಯಲು ತೆರಳಿದ ಯುವಕ ಮೊಸಳೆ ದಾಳಿಗೆ ಬಲಿ

ಶಾಲಾ ಬಾಲಕಿಗೆ ಆನ್‍ಲೈನ್‍ ನಲ್ಲಿ ಲೈಂಗಿಕ ಕಿರುಕುಳ: ಆರೋಪಿಯ ಬಂಧನ

ಬಿಎಸ್ ​ಪಿ ವರಿಷ್ಠೆ ಮಾಯಾವತಿಯಿಂದ ಪಂಜಾಬ್ ​ನಲ್ಲಿ ಚುನಾವಣಾ ರ‍್ಯಾಲಿ

ಇತ್ತೀಚಿನ ಸುದ್ದಿ