ಬಲೆಗೆ ಬಿದ್ದ ವಿಚಿತ್ರ ಬೃಹತ್ ಮೀನನ್ನು ಕಂಡು ಬೆಚ್ಚಿ ಬಿದ್ದ ಮೀನುಗಾರರು ! - Mahanayaka
3:39 AM Thursday 19 - September 2024

ಬಲೆಗೆ ಬಿದ್ದ ವಿಚಿತ್ರ ಬೃಹತ್ ಮೀನನ್ನು ಕಂಡು ಬೆಚ್ಚಿ ಬಿದ್ದ ಮೀನುಗಾರರು !

rough shark
10/09/2021

ಬಲೆಗೆ ದೊಡ್ಡ ಮೀನೊಂದನ್ನು ಕಂಡು ಮೀನುಗಾರರು ಕ್ಷಣ ಕಾಲ ಗಡಗಡ ನಡುಗಿದ ಘಟನೆ  ನಡೆದಿದ್ದು, ನೋಡಲು ಭಯಂಕರವಾಗಿದ್ದ ಮೀನನ್ನು ಕಂಡು ಮೀನುಗಾರರು ಬೆಚ್ಚಿ ಬಿದ್ದಿದ್ದಾರೆ. ಆದರೆ, ಇದೀಗ ಇದೊಂದು ಅಳಿವಿನಂಚಿನಲ್ಲಿರುವ ಅಪರೂಪದ ಮೀನು ಎಂದು ತಿಳಿದು ಬಂದಿದೆ.

ಇಟಾಲಿಯನ್ ದ್ವೀಪವಾದ ಎಲ್ಬಾದ ಪೋರ್ಟೋಫೆರಾಯೋ ಪಟ್ಟಣದಲ್ಲಿರುವ ದರ್ಸೇನಾ ಮೆಡಿಸಿಯಾದಲ್ಲಿ ಈ ಮೀನು ಪತ್ತೆಯಾಗಿದೆ. ದೇಹ ಶಾರ್ಕ್ ನಂತಿದ್ದರೂ ಮೀನಿನ ಮುಖ ಮಾತ್ರ ಹಂದಿಯ ಮುಖದಂತಿತ್ತು. ಈ ಮೀನನ್ನು ನೋಡುತ್ತಿದ್ದಂತೆಯೇ ಮೀನುಗಾರರು ಬೆಚ್ಚಿಬಿದ್ದಿದ್ದಾರೆ.

ಇನ್ನೂ ಈ ಮೀನನ್ನು ಪರಿಶೀಲನೆ ನಡೆಸಿದ ಬಳಿಕ ಅದೊಂದು ರಫ್ ಶಾರ್ಕ್-ಆಕ್ಸಿನೋಟಸ್ ಸೆಂಟ್ರಿನಾ ಎಂದು ತಿಳಿದು ಬಂದಿದೆ. ಈ ಮೀನ ಆಳ ಸಮುದ್ರದಲ್ಲಿ ವಾಸಿಸುತ್ತದೆ. ಈ ಮೀನಿಗೆ ಹಂದಿ ಮುಖದ ಶಾರ್ಖ್ ಎಂದೂ ಕರೆಯುತ್ತಾರೆ.


Provided by

ಇದೀಗ ಈ ಮೀನನ್ನು ಇಂಟರ್ನ್ಯಾಷನಲ್ ಯೂನಿಯನ್ ಫಾರ್ ದಿ ಕನ್ಸರ್ವೇಶನ್ ಆಫ್ ನೇಚರ್ ಸಂಸ್ಥೆಯು ಅಳಿವಿನಂಚಿನಲ್ಲಿರುವ ಜಲಚರ ಎಂದು ಪಟ್ಟಿ ಮಾಡಿದೆ. ಈ ಸುದ್ದಿಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಇದರ ಚಿತ್ರಗಳು ವ್ಯಾಪಕ ವೈರಲ್ ಆಗಿದೆ.

ಇನ್ನಷ್ಟು ಸುದ್ದಿಗಳು…

ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಖಾಸಗಿ ಅಂಗಕ್ಕೆ ರಾಡ್ ನುಗ್ಗಿಸಿದ ದುಷ್ಟರು: ಮಹಿಳೆಯ ಸ್ಥಿತಿ ಚಿಂತಾಜನಕ

ನಾನು ಕಾಶ್ಮೀರ್ ಪಂಡಿತ್, ನನ್ನ ಕುಟುಂಬ ಕಾಶ್ಮೀರ್ ಪಂಡಿತ್ | ರಾಹುಲ್ ಗಾಂಧಿ

ಬಾಗಿಲು ಮುಚ್ಚಿದ ಕಾರು ತಯಾರಿಕಾ ‘ಫೋರ್ಡ್’ ಸಂಸ್ಥೆ | ಎಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗಲಿದ್ದಾರೆ ಗೊತ್ತಾ?

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು, ಪೋಷಕರ ಮೇಲೆ ಮಾರಣಾಂತಿಕ ಹಲ್ಲೆ: ವ್ಯಾಪಕ ಆಕ್ರೋಶ

ಪೆಟ್ರೋಲ್ ತುಂಬುತ್ತಿದ್ದ ವೇಳೆ ಕಾರಿಗೆ ಬೆಂಕಿ: ಬಾಲಕಿ ಸಹಿತ 9 ಮಹಿಳೆಯರು ಸುಟ್ಟು ಕರಕಲು

ಗಣೇಶೋತ್ಸವದ ಶುಭಾಶಯ ಕೋರಿದ ಗಣ್ಯರು: ಕೊರೊನಾ ತೊಲಗಲಿ ಎಂದು ಪ್ರಾರ್ಥಿಸಲು ಕರೆ

ಸಾಬಿಯಾ ಸೈಫಿ ಅತ್ಯಾಚಾರ, ಬರ್ಬರ ಹತ್ಯೆ ವಿರುದ್ಧ ಎಸ್ ಡಿಪಿಐ ಬೃಹತ್ ಹಕ್ಕೊತ್ತಾಯ

ಇತ್ತೀಚಿನ ಸುದ್ದಿ