ಬಾಲ್ಯ ವಿವಾಹ ತಡೆದಿದ್ದಕ್ಕೆ ಅಂಗನವಾಡಿ ಕೇಂದ್ರ ಖಾಲಿ ಮಾಡಿಸಿದ ಮನೆ ಮಾಲಿಕ - Mahanayaka
3:18 AM Wednesday 5 - February 2025

ಬಾಲ್ಯ ವಿವಾಹ ತಡೆದಿದ್ದಕ್ಕೆ ಅಂಗನವಾಡಿ ಕೇಂದ್ರ ಖಾಲಿ ಮಾಡಿಸಿದ ಮನೆ ಮಾಲಿಕ

anganawadi
03/07/2021

ಚಾಮರಾಜನಗರ:  ಬಾಲ್ಯ ವಿವಾಹವನ್ನು ತಡೆದಿದ್ದಕ್ಕೆ ಕೋಪಗೊಂಡ ಮನೆ ಮಾಲಿಕ, ಬಾಡಿಗೆಗೆ ನೀಡಿದ್ದ ಅಂಗನವಾಡಿ ಕೇಂದ್ರವನ್ನೇ ಖಾಲಿ ಮಾಡಿಸಿದ ಘಟನೆ ಚಾಮರಾಜನಗರದಿಂದ ವರದಿಯಾಗಿದೆ.

ಜಿಲ್ಲೆಯ ಮಹದೇಶ್ವರ ಬೆಟ್ಟದ ಇಂಡಿಗನತ್ತ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಗ್ರಾಮದ ಶಿವಕುಮಾರ್ ಎಂಬವರ ಬಾಡಿಗೆ ಮನೆಯಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದ ಅಂಗನವಾಡಿ ಕೇಂದ್ರವನ್ನು ಖಾಲಿ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.

ತನ್ನ ಮಗಳ ಬಾಲ್ಯವಿವಾಹವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಡೆದಿದ್ದರಿಂದ ಕೋಪಗೊಂಡು, ಅಂಗನವಾಡಿ ಕೇಂದ್ರವನ್ನು ಖಾಲಿ ಮಾಡಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಮನೆಯ ಮಾಲಿಕ, ಅಂಗನವಾಡಿ ಕೇಂದ್ರದಲ್ಲಿದ್ದ ಆಹಾರ ಪದಾರ್ಥ ಮತ್ತು ಸಾಮಾನುಗಳನ್ನು ಬೀದಿಗೆ ಚೆಲ್ಲಿ ಕೇಂದ್ರವನ್ನು ಖಾಲಿ ಮಾಡಿಸಿರುವುದಾಗಿ ವರದಿಯಾಗಿದೆ

ಇತ್ತೀಚಿನ ಸುದ್ದಿ