ಬ್ಯಾನ್: ತೆಲಂಗಾಣದಲ್ಲಿ ಕಂಗನಾ ರವಾತ್ ರ ಹೊಸ ಸಿನಿಮಾಗೆ ನಿಷೇಧದ ಭೀತಿ
ಕಾನೂನು ಸಮಾಲೋಚನೆ ಬಾಕಿ ಇರುವವರೆಗೆ ಕಂಗನಾ ರಾವತ್ ಅವರ ಮುಂಬರುವ ಚಿತ್ರ “ಎಮೆರ್ಜೆನ್ಸಿ” ಬಿಡುಗಡೆಯನ್ನು ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರ ಪರಿಗಣಿಸುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಸಿಖ್ ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ ಎಂದು ಸರ್ಕಾರದ ಸಲಹೆಗಾರ ಮೊಹಮ್ಮದ್ ಅಲಿ ಶಬ್ಬೀರ್ ಗುರುವಾರ ತಿಳಿಸಿದ್ದಾರೆ.
ಮಾಜಿ ಐಪಿಎಸ್ ಅಧಿಕಾರಿ ತೇಜ್ದೀಪ್ ಕೌರ್ ಮೆನನ್ ನೇತೃತ್ವದ ತೆಲಂಗಾಣ ಸಿಖ್ ಸೊಸೈಟಿಯ ನಿಯೋಗವು ಶಬ್ಬೀರ್ ಅವರನ್ನು ಸಚಿವಾಲಯದಲ್ಲಿ ಭೇಟಿಯಾಗಿ ಕಂಗನಾರ ಹೊಸ ಚಿತ್ರದ ಪ್ರದರ್ಶನವನ್ನು ನಿಷೇಧಿಸುವಂತೆ ವಿನಂತಿಸಿತು. ಅಂದಹಾಗೇ 18 ಸದಸ್ಯರ ನಿಯೋಗವು ಮನವಿಯನ್ನು ಸಲ್ಲಿಸಿದ್ದು, ಈ ಚಿತ್ರದಲ್ಲಿ ಸಿಖ್ ಸಮುದಾಯವನ್ನು ಚಿತ್ರಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಶಬ್ಬೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಚಿತ್ರವು ಸಿಖ್ಖರನ್ನು ಭಯೋತ್ಪಾದಕರು ಮತ್ತು ರಾಷ್ಟ್ರ ವಿರೋಧಿಗಳು ಎಂದು ಚಿತ್ರಿಸುತ್ತದೆ. ಇದು ಸಿಖ್ ಸಮುದಾಯದ ಚಿತ್ರಣಕ್ಕೆ ಹಾನಿಕಾರಕವಾಗಿದೆ ಎಂದು ನಿಯೋಗ ಆರೋಪಿಸಿದೆ.
ತೆಲಂಗಾಣದಲ್ಲಿ ಚಿತ್ರವನ್ನು ನಿಷೇಧಿಸುವ ಬಗ್ಗೆ ಪರಿಗಣಿಸುವಂತೆ ಶಬ್ಬೀರ್ ಮುಖ್ಯಮಂತ್ರಿಯನ್ನು ವಿನಂತಿಸಿದ್ದಾರೆ. ರೆಡ್ಡಿ ಅವರನ್ನು ಭೇಟಿಯಾದ ಶಬ್ಬೀರ್, ಕಾನೂನು ಸಲಹೆ ಪಡೆದ ನಂತರ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth