ಕುರಾನ್, ಭಗವದ್ಗೀತೆ, ಬೈಬಲ್ ಅರಿತವನು ಕೋಮುವಾದಿಯಾಗಲಾರ: ಮೌಲಾನ ಸಿನಾನ್ ಫೈಝಿ
ಕೊಟ್ಟಿಗೆಹಾರ: ಕರುಣೆಯ ಕಡೆಗೋಲಿನಿಂದ ಜಗತ್ತನ್ನು ಬಡಿದೆಬ್ಬಿಸಿದವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಎಂದು ಚಕ್ಕಮಕ್ಕಿಯ ಖಲಂದರಿಯ ಅನಾಥಾಶ್ರಮದ ಪ್ರಾಂಶುಪಾಲರಾದ ಮೌಲಾನ ಸಿನಾನ್ ಫೈಝಿ ಹೇಳಿದರು.
ಬಣಕಲ್ ಹೋಬಳಿ ಮಿಲಾದ್ ಟ್ರಸ್ಟ್, ಬಣಕಲ್ ಹೋಬಳಿ ಮಟ್ಟದ ಎಲ್ಲಾ ಆರು ಜಮಾಅತ್ ಗಳ ಸಹಯೋಗದೊಂದಿಗೆ ಬಣಕಲ್ ನಲ್ಲಿ ನಡೆದ ವಾರ್ಷಿಕ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮುಖ್ಯಪ್ರಭಾಷಣ ನೀಡಿ ಅವರು ಮಾತನಾಡಿದರು.
ಕುರಾನ್, ಭಗವದ್ಗೀತೆ, ಬೈಬಲ್ ಮುಂತಾದ ಧರ್ಮಗ್ರಂಥಗಳನ್ನು ಪೂರ್ಣವಾಗಿ ಅರಿತವನು ಕೋಮುವಾದಿಯಾಗಲು ಸಾಧ್ಯವಿಲ್ಲ. ಸತ್ಯ ಧರ್ಮದಿಂದ ಹೇಗೆ ಜೀವಿಸಬೇಕು ಎಂಬುದನ್ನು ತೋರಿಸಿಕೊಟ್ಟವರು ಮಹಮ್ಮದ್ ಪೈಗಂಬರ್ ಅವರು. ಪ್ರೀತಿ, ಕರುಣೆಯಿಂದ ಪ್ರವಾಧಿಗಳ ಮಾರ್ಗದರ್ಶನದಲ್ಲಿ ಜೀವಿಸಬೇಕಿದೆ ಎಂದರು.
ಬಣಕಲ್ ಸುನ್ನೀ ಜಾಮೀಯಾ ಜುಮ್ಮ ಮಸೀದಿಯ ಧರ್ಮಗುರುಗಳಾದ ಜನಾಬ್ ಮೌಲನಾ ಮಹಮ್ಮದ್ ಶಾಕೀಬ್ ರಝ್ವೀ ನೂರಿ ಮಾತನಾಡಿ, ಅನ್ಯಧರ್ಮಿಯರನ್ನು ಸಹೋದರರಂತೆ ಕಾಣಿ ಎಂದವರು ಮಹಮ್ಮದ್ ಪೈಗಂಬರ್ ಅವರು. ಶಾಂತಿ ಮತ್ತು ಕರುಣೆ ಜಗತನ್ನು ಸುಖವಾಗಿಡಬಲ್ಲ ಶಕ್ತಿಯುತ ಅಸ್ತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಜನಾಬ್ ಸಿನಾನ್ ಫೈಝಿ, ಜನಾಬ್ ಮೌಲನಾ ಮಹಮ್ಮದ್ ಶಾಕೀಬ್ ರಝ್ವೀ ನೂರಿ, ವಾಸುದೇವ್ ಭಟ್, ಡಾ. ಇಕ್ಲಾಸ್ ಅಹಮ್ಮದ್, ಅಲ್ ಹಾಜಿ ಮಹಮ್ಮದ್ ಶಾಹಿದ್ ರಝ್ವೀ, ಅಲ್ ಹಾಜಿ ಫೈರೋಜ್ ಅಹಮ್ಮದ್, ಎನ್.ಟಿ ದಿನೇಶ್, ಡಾ.ಟಿ.ಎಂ.ನಾಸೀರ್, ಡಾ,ಫೈರೋಜ್ ಅಹಮದ್, ಹೆಸ್ಗಲ್ ವೆಂಕಟೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕೊಟ್ಟಿಗೆಹಾರ ಬದ್ರಿಯಾ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ರೆಹಮಾನ್ ಫೈಝಿ, ಬಣಕಲ್ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಜುಬೇರ್ ಧಾರಿಮಿ, ಬಣಕಲ್ ಹೋಬಳಿ ಮಿಲಾದ್ ಟ್ರಸ್ಟ್ ಅಧ್ಯಕ್ಷರಾದ ಬಿ.ಎಂ.ಅಲಿಹಾಜಿ, ಕಾಯಾಧ್ಯಕ್ಷರಾದ ಜಾಕೀರ್ ಹುಸೇನ್, ಉಪಾಧ್ಯಕ್ಷರಾದ ಎ,ಸಿ.ಅಯೂಬ್, ಹೊರಟ್ಟಿ ಜಾಮಿಯ ಮಸೀದಿಯ ಮೌಲಾನ ಅಲ್ಲಾ ಭಕ್ಷ್ ರಝ್ವೀ, ಹಳಿಕೆ ಜಾಮೀಯಾ ಮಸೀದಿಯ ಮೌಲಾನ ಶಾಕೀಬ್ ಹುಸೇನ್ ರಝ್ವೀ, ಚಕ್ಕಮಕ್ಕಿಯ ಖತೀಬರಾದ ಮೌಲಾನ ಜಮಾಲ್ ಫೈಝಿ ಮುಂತಾದವರು ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka