ಬೆನಕನಹಳ್ಳಿ: 19ರಂದು ಬಂಡೆ ರಂಗನಾಥ ದೇವರ ಚಟ್ಟಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ

ಶಹಾಪುರ: ಶಹಾಪುರ ಹತ್ತಿರದ ಬೆನಕನಹಳ್ಳಿ(ಜೆ) ಗ್ರಾಮದಲ್ಲಿ ನವೆಂಬರ್ 19 ರಂದು ಶ್ರೀ ಬಂಡೆ ರಂಗನಾಥ ದೇವರ ಚಟ್ಟಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಅಂದು ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಶ್ರೀ ಬಂಡೆ ರಂಗನಾಥ ಸ್ವಾಮಿಯ ಪಲ್ಲಕ್ಕಿ ಗ್ರಾಮದ ಹೊರವಲಯದಲ್ಲಿರುವ ರಾಜಶೇಖರ ತೋಟದ ಬಾವಿಗೆ ಗಂಗಾಸ್ನಾನಕ್ಕೆ ತೆರಳುವ ಮೂಲಕ ಗಂಗಾಸ್ನಾನ ಮುಗಿಸಿಕೊಂಡು ಸಕಲ ವಾದ್ಯಮೇಳ, ಭಾಜಾ – ಭಜಂತ್ರಿಗಳೊಂದಿಗೆ ಆಗಮಿಸಿ ಊರಿನ ಪ್ರಮುಖ ಬೀದಿ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ .
ತಾಲೂಕಿನ ಸುತ್ತಮುತ್ತಲಿನ ಆಗಮಿಸುವ ಭಕ್ತರು ಶ್ರೀರಂಗನಾಥನ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಶ್ರೀ ರಂಗನಾಥನ ದರ್ಶನ ಪಡೆದುಕೊಳ್ಳಬೇಕೆಂದು ದೇವಸ್ಥಾನದ ಪ್ರಧಾನ ಅರ್ಚಕರಾದ ಮಲ್ಲಯ್ಯ ಮುತ್ಯಾ ಹೂಗಾರ ಭಕ್ತರಲ್ಲಿ ಮನವಿ ಮಾಡಿದ್ದಾರೆ..
ಬೇರೆಡೆಯಿಂದ ಆಗಮಿಸುವ ಭಕ್ತಾದಿಗಳಿಗೆ ಬೆನಕನಹಳ್ಳಿ (ಜೆ) ಗ್ರಾಮಸ್ಥರು ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka