ಕ್ವಾರಿ ದುರಂತ: ಬಂಡೆ ಉರುಳಿ ಬಿದ್ದು 3 ಮಂದಿ ಸಾವು, ಹಿಟಾಚಿಯೊಳಗೆ ಸಿಲುಕಿರುವ ಚಾಲಕ - Mahanayaka
10:01 PM Wednesday 11 - December 2024

ಕ್ವಾರಿ ದುರಂತ: ಬಂಡೆ ಉರುಳಿ ಬಿದ್ದು 3 ಮಂದಿ ಸಾವು, ಹಿಟಾಚಿಯೊಳಗೆ ಸಿಲುಕಿರುವ ಚಾಲಕ

kwari
17/05/2022

ತಿರುನಲ್ವೇಲಿ: ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಮುನ್ನೀರಪಳ್ಳಂ ಬಳಿ ನಡೆದ ಕ್ವಾರಿ ದುರಂತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಬಂಡೆಗಳ ನಡುವೆ ಹಿಟಾಚಿ ಯಂತ್ರದೊಳಗೆ ಸಿಲುಕಿದ್ದಾನೆ ಎಂದು ತಿಳಿದಿ ಬಂದಿದೆ.

ಅಡೈಮಿತಿಪ್ಪಂಕುಳಂನಲ್ಲಿ ಶನಿವಾರ ರಾತ್ರಿ 300 ಅಡಿ ಆಳದ ಕಲ್ಲಿನ ಕ್ವಾರಿಯಲ್ಲಿ ದೈತ್ಯ ಬಂಡೆಯೊಂದು ಉರುಳಿಬಿದ್ದ ಪರಿಣಾಮ ಆರು ಕಾರ್ಮಿಕರು ಅದರಲ್ಲಿ ಸಿಲುಕಿಕೊಂಡಿದ್ದಾರೆ. ಅದರಲ್ಲಿ ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ಲಾರಿ ಚಾಲಕ ಸೆಲ್ವಕುಮಾರ್ ಜೀವಂತವಾಗಿದ್ದು, ಬಂಡೆಗಳ ನಡುವೆ ಹಿಟಾಚಿ ಯಂತ್ರದೊಳಗೆ ಸಿಲುಕಿದ್ದಾನೆ. ಲಾರಿ ಚಾಲಕ ರಾಜೇಂದ್ರನ್ ಮತ್ತು ಹಿಟಾಚಿ ಆಪರೇಟರ್‌ಗಳಾದ ಸೆಲ್ವಂ, ಮುರುಗನ್ ಎಂಬುವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ 15 ಗಂಟೆಗಳಿಂದಲೂ ರಕ್ಷಣಾ ಕಾರ್ಯ ಮುಂದುವರೆದಿದ್ದು, ರಾಷ್ಟ್ರೀಯ ವಿಪತ್ತು ರಕ್ಷಣಾ ತಂಡ ಸ್ಥಳಕ್ಕೆ ಬರುತ್ತಿದೆ. ಆದರೆ, ರಸ್ತೆ ಮಾರ್ಗವಾಗಿ ಈ ತಂಡ ಇಲ್ಲಿಗೆ ಬರಲು ಇನ್ನೂ ಹಲವು ಗಂಟೆಗಳು ಬೇಕಾಗುತ್ತದೆ. ಮೇಲಾಗಿ ಸತತವಾಗಿ ಬಂಡೆಗಳು ಕುಸಿದು ಬೀಳುತ್ತಿರುವುದರಿಂದ ರಕ್ಷಣಾ ಕಾರ್ಯ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫೇಸ್ ಬುಕ್ ಲೈವ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಪೊಲೀಸರು

ಜ್ಞಾನವಾಪಿ ಮಸೀದಿಯೊಳಗೆ 12 ಅಡಿ ಶಿವಲಿಂಗ ಹಾಗೂ ನಂದಿ ಪತ್ತೆ: ನಾಳೆ ಕೋರ್ಟ್ ಗೆ ವರದಿ

ದೇವಸಹಾಯಂ ಪಿಳ್ಳೈ ಪೋಪ್ ಫ್ರಾನ್ಸಿಸ್  “ಸಂತ” ಎಂದು ಘೋಷಣೆ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂದು ಅಕ್ಕನಿಂದಲೇ ತಮ್ಮನ ಹತ್ಯೆ!

ಶ್ರೀಗುರುದತ್ತಾತ್ರೇಯ ಪೀಠದ ಹೋಮ ನಡೆಯುವ ಸ್ಥಳದಲ್ಲಿ ನಾನ್ ವೆಜ್ ಊಟ, ಭಕ್ತರಿಂದ ಆಕ್ರೋಶ

ಇತ್ತೀಚಿನ ಸುದ್ದಿ