ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್ ಗೆ ಕರೆ: ಟ್ಯಾಕ್ಸಿ ಮೇಲೆ ಕಲ್ಲೆಸೆತ

taxi
11/09/2023

ಬೆಂಗಳೂರು :ಏರ್‌ ಪೋರ್ಟ್‌ ಗೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಟ್ಯಾಕ್ಸಿಯೊಂದಕ್ಕೆ ಕಲ್ಲೆಸೆಯಲಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಖಾಸಗಿ ಸಾರಿಗೆ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ಗೆ  ಕರೆ ನೀಡಲಾಗಿದೆ. ಹಿನ್ನಲೆಯಲ್ಲಿ ಖಾಸಗಿ ಸಾರಿಗೆ ವ್ಯವಸ್ಥೆ ಸಂಚರಿಸುತ್ತಿಲ್ಲ.  ಈ ನಡುವೆ ಟಾಕ್ಸಿಯೊಂದಕ್ಕೆ ಕಲ್ಲೆಸೆಯಲಾಗಿದೆ.

ಬೆಂಗಳೂರು ಬಂದ್ ಹಿನ್ನೆಲೆ ಬಹುತೇಕ ಎಲ್ಲ ಖಾಸಗಿ ವಾಹನಗಳಾದ ಆಟೋ, ಟ್ಯಾಕ್ಸಿ ಸೇರಿದಂತೆ ಇನ್ನಿತರೆ ವಾಹನಗಳು ಓಡಾಟವನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿವೆ. ಈ ನಡುವೆಯೂ ಅಲ್ಲಲ್ಲಿ ಕೆಲವು ಖಾಸಗಿ ವಾಹನಗಳು ಪ್ರಯಾಣಿಕರಿಗೆ ಎಂದಿನಂತೆ ಸೇವೆ ನೀಡುತ್ತಿವೆ.

ಬಂದ್ ನಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಿನವೂ ಶಾಲಾ ಕಾಲೇಜುಗಳಿಗೆ ಕರೆದೊಯ್ಯಲು ಬರುತ್ತಿದ್ದ ಖಾಸಗಿ ಬಸ್‌ ಗಳು ರಸ್ತೆಗಿಳಿಯದೆ ವಿದ್ಯಾರ್ಥಿಗಳಿಗೂ ಬಂದ್ ಬಿಸಿ ತಟ್ಟಿದೆ.

ಖಾಸಗಿ ಸಾರಿಗೆಯ ಮುಷ್ಕರದಿಂದ ಬಿಎಂಟಿಸಿ ಬಸ್‌ ಗಳು ಫುಲ್ ರಷ್ ಆಗಿ ಓಡಾಡುತ್ತಿವೆ. ಬಸ್‌ ನಲ್ಲಿ ಪ್ರಯಾಣಿಕರ ಜನ ಜಂಗುಳಿ ಮುಂದುವರೆದಿದೆ.

ಇತ್ತೀಚಿನ ಸುದ್ದಿ

Exit mobile version