ಬೆಂಗಳೂರಿನ ಅಪಾರ್ಟ್​ಮೆಂಟ್ ನಲ್ಲಿ ಅಗ್ನಿ ಅವಘಡ: ತಾಯಿ, ಮಗಳು ಸಜೀವ ದಹನ - Mahanayaka

ಬೆಂಗಳೂರಿನ ಅಪಾರ್ಟ್​ಮೆಂಟ್ ನಲ್ಲಿ ಅಗ್ನಿ ಅವಘಡ: ತಾಯಿ, ಮಗಳು ಸಜೀವ ದಹನ

bangalore
21/09/2021

ಬೆಂಗಳೂರು: ಬೆಂಗಳೂರಿನ ಅಪಾರ್ಟ್​ಮೆಂಟ್ ನಲ್ಲಿ ನಡೆದ​ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವದಹನ ಆಗಿದ್ದು, ಅಗ್ನಿ ಅವಘಡದಲ್ಲಿ ಭೀಮಸೇನ್‌ ಎಂಬುವವರಿಗೆ ಗಾಯಗೊಂಡಿದ್ದಾರೆ. ಗಾಯಾಳು ಭೀಮಸೇನ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತಾಯಿ ಲಕ್ಷ್ಮೀದೇವಿ (82), ಪುತ್ರಿ ಭಾಗ್ಯ ರೇಖಾ (59) ಮೃತರು.  210 ನೇ ಫ್ಲ್ಯಾಟ್‌ ನಲ್ಲಿದ್ದ ತಾಯಿ ಹಾಗೂ ಮಗಳು ಸಜೀವದಹನ ಆಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ತಾಯಿ, ಪುತ್ರಿ ಮೃತದೇಹ ಪತ್ತೆಯಾಗಿದೆ. ಮೂರನೇ ಮಹಡಿಯ 210ನೇ ಫ್ಲ್ಯಾಟ್‌ ನಲ್ಲಿದ್ದ ನಿವಾಸಿಗಳು ಸಾವನ್ನಪ್ಪಿದ್ದಾರೆ.

ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅಗ್ನಿಶಾಮಕ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಹೇಳಿಕೆ ನೀಡಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿದ ಶಂಕೆ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸಿಲಿಂಡರ್ ಸ್ಫೋಟ ಶಂಕೆ ವ್ಯಕ್ತವಾಗಿದೆ. ತನಿಖೆ ನಂತರ ವಾಸ್ತವಾಂಶ ತಿಳಿಯಲಿದೆ.


Provided by

ಮಂಗಳವಾರ ಮಧ್ಯಾಹ್ನ ಸುಮಾರು 3:30 ಗಂಟೆಗೆ ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆ ಬಳಿಯಿರುವ ದೇವರ ಚಿಕ್ಕನಹಳ್ಳಿಯ ಖಾಸಗಿ ಅಪಾರ್ಟ್‌ಮೆಂಟ್‌ ನ ಎರಡನೇ ಮಹಡಿಯಲ್ಲಿ ಗ್ಯಾಸ್‌ ಪೈಪ್‌ ನಲ್ಲಿ ಗ್ಯಾಸ್‌ ಸೋರಿಕೆಯಾಗಿ ಈ ಸಿಲಿಂಡರ್‌ ಸ್ಪೋಟವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

ವಿಷ ಸೇವಿಸಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಬಾಲಕಿ ಚಿಕಿತ್ಸೆ ಫಲಿಸದೇ ಸಾವು

ಕಡಲತೀರದಲ್ಲಿ  ಆಕ್ರಮಣಕಾರಿ ‘ಟೈಗರ್ ಶಾರ್ಕ್’ನ ಕಳೇಬರ ಪತ್ತೆ

ನೆಲಗಡಲೆ, ಬಾದಾಮಿ, ಒಣದ್ರಾಕ್ಷಿ ಹೃದಯಕ್ಕೆ ಚೈತನ್ಯ ತುಂಬುವ ತಿನಿಸುಗಳು

ಕೋಲಾರ ಘಟನೆ: ಬಿಜೆಪಿ, ಹಿಂದೂತ್ವ ಸಂಘಟನೆಗಳಿಗೆ ನಾಚಿಕೆಗೇಡು! | ಬಿಜೆಪಿ ಮನುವಾದಿ ಎಂದ ಕಾಂಗ್ರೆಸ್

ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ರಾಜಕೀಯಕ್ಕೆ ಎಂಟ್ರಿ? | ಆಸ್ಕರ್ ಫೆರ್ನಾಂಡಿಸ್ ಸ್ಥಾನ ತುಂಬುತ್ತಾರಾ?

ಗೋಶಾಲೆಗಳನ್ನೇ ಮಾಂಸ ಮಾರಾಟ ಕೇಂದ್ರಗಳನ್ನಾಗಿಸುವ ಹುನ್ನಾರ ನಡೆಯುತ್ತಿದೆ | ಕೋಡಿಹಳ್ಳಿ ಚಂದ್ರಶೇಖರ್ ಗಂಭೀರ ಆರೋಪ

 

ಇತ್ತೀಚಿನ ಸುದ್ದಿ