PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ : ಮನೆಯಲ್ಲಿಯೇ ಕುಳಿತು ಅರ್ಜಿ ಹಾಕಿ
ಬೆಂಗಳೂರು: ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 30 ಟೈಪಿಸ್ಟ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಫೆಬ್ರವರಿ 04, 2024ರಂದು ಅಧಿಸೂಚನೆ ಹೊರಡಿಸಿತ್ತು.
ವಯೋಮಿತಿ ಸಡಿಲಿಕೆ ಹಾಗೂ ಇತರೆ ಕಾರಣಗಳಿಂದಾಗಿ ಇರುವಂತಹ ಅಭ್ಯರ್ಥಿಗಳಿಗೆ ಈಗ ಪುನಃ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಜನವರಿ 06, 2025ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ.
ಅರ್ಹತೆಗಳೆನಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸಾಗಿದ್ದು, ಅದರ ಜೊತೆಗೆ ಸೀನಿಯರ್ ಗ್ರೇಡ್ ಟೈಪ್ ರೈಟಿಂಗ್ ಪರೀಕ್ಷೆ ಪಾಸಾಗಿರಬೇಕು.
ವಯೋಮಿತಿ ಅರ್ಹತೆ — ಕನಿಷ್ಠ 18 ವರ್ಷ ಹಾಗೂ ಗರಿಷ್ಟ ವಯೋಮಿತಿಯು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಇರಬೇಕು.
* ಸಾಮಾನ್ಯ ವರ್ಗದವರಿಗೆ — 38 ವರ್ಷ
* ಕೆಟಗರಿ 2a, 2b, 3a ಹಾಗೂ 3b ವರ್ಗದವರಿಗೆ — 41 ವರ್ಷ
* SC, ST ಹಾಗೂ ಕೇಟೆಗರಿ 1 — 43 ವರ್ಷ
ಅರ್ಜಿ ಶುಲ್ಕವೆಷ್ಟು ?
ಅರ್ಹತೆಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ಅರ್ಜಿ ಶುಲ್ಕವನ್ನು ಪಾವತಿಸಬೇಕು.
* ಸಾಮಾನ್ಯ ವರ್ಗದವರಿಗೆ — 200ರೂ.
* ಕೆಟಗರಿ 2a, 2b, 3a ಹಾಗೂ 3b ವರ್ಗದವರಿಗೆ — 100ರೂ.
* SC, ST ಹಾಗೂ ಕೇಟೆಗರಿ 1 — ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಅರ್ಜಿ ಸಲ್ಲಿಸಲಿಕ್ಕೆ ಕೊನೆಯ ದಿನಾಂಕ – ಜನವರಿ 06, 2025
ಮನೆಯಲ್ಲಿಯೇ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ : https://bengalururural.dcourts.gov.in/notice-category/recruitments/
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: