ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ: ಆರೋಪಿಗಳ ಮೊಬೈಲ್ ನಲ್ಲಿ ಸಾವಿರಕ್ಕೂ ಅಧಿಕ ವಿಡಿಯೋ ಪತ್ತೆ - Mahanayaka
9:29 AM Wednesday 5 - February 2025

ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ: ಆರೋಪಿಗಳ ಮೊಬೈಲ್ ನಲ್ಲಿ ಸಾವಿರಕ್ಕೂ ಅಧಿಕ ವಿಡಿಯೋ ಪತ್ತೆ

bangalore
20/06/2021

ಬೆಂಗಳೂರು:  ಬಾಂಗ್ಲಾದೇಶದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಬಳಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಲೈಂಗಿಕ ಚಟುವಟಿಕೆಗಳ ವಿಡಿಯೋಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.

ಯುವತಿಯೋರ್ವಳ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ರೇಪ್ ಮಾಡುತ್ತಿರುವ ದೃಶ್ಯ ವೈರಲ್ ಆದ ಬಳಿಕ  ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ  ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ 10ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದರು.

ಯುವತಿಯರು ಅರೆ ಬೆತ್ತಲೆಯಾಗಿ ಡಾನ್ಸ್ ಮಾಡುತ್ತಿರುವುದು ಸೇರಿದಂತೆ ಹಲವು ಲೈಂಗಿಕ ಚಟುವಟಿಕೆಗಳ ವಿಡಿಯೋಗಳು ಆರೋಪಿಗಳ ಮೊಬೈಲ್ ನಲ್ಲಿ ಪತ್ತೆಯಾಗಿದೆ. ಈ ಘಟನೆ ಮಾತ್ರವಲ್ಲದೇ ಹಲವು ಗ್ಯಾಂಗ್ ರೇಪ್ ಗಳ ವಿಡಿಯೋ ಯುವಕರ ಮೊಬೈಲ್ ನಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಯುವಕ-ಯುವತಿಯರು ವೇಶ್ಯಾವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದರು. ನಗರದ ಪ್ರತಿಷ್ಠಿತ ಲೇಔಟ್ ಗಳಲ್ಲಿ  ಬಾಡಿಗೆ ಮನೆ ಮಾಡಿಕೊಂಡು ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಹಣ ಹಂಚಿಕೆ ವಿಚಾರದಲ್ಲಿ ನಡೆದ, ಗಲಾಟೆಯ ಸಂದರ್ಭ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಹರಿಯಬಿಟ್ಟಿದ್ದರು ಇದರಿಂದಾಗಿ ಈ ಜಾಲ ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ