“ಬೆಂಗಳೂರು ನಗರದಲ್ಲಿ ಕಠಿಣ ನಿಯಮ ಅತ್ಯಗತ್ಯ” | ಲಾಕ್ ಆಗುತ್ತಾ ಬೆಂಗಳೂರು?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯುತ್ತಿದೆ. ಸಿಎಂ ಯಡಿಯೂರಪ್ಪ ಸಭೆಗೆ ಆಗಮಿಸಿದ್ದು, ಸಚಿವರುಗಳು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೊರೊನಾ ಸಂಬಂಧ ಮಾಹಿತಿ ಹಾಗೂ ಸಲಹೆಗಳನ್ನು ನೀಡುತ್ತಿದ್ದಾರೆ.
ಕ್ಯಾಬಿನೆಟ್ ಸಭೆಯು ವಿಧಾನಸೌಧದ ಸಮ್ಮೇಳನಾ ಸಭೆಯಲ್ಲಿನಡೆಯುತ್ತಿದೆ. ಸದ್ಯದ ಮಾಹಿತಿಯ ಪ್ರಕಾರ ಸಚಿವ ಸುಧಾಕರ್ ಅವರು, ಬೆಂಗಳೂರಿಗೆ ಕಠಿಣ ನಿಯಮದ ಅಗತ್ಯ ಇದೆ ಎಂದು ಒತ್ತಿ ಹೇಳಿದ್ದಾರೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬೆಂಗಳೂರನ್ನು ನಿಯಂತ್ರಣಕ್ಕೆ ತಂದರೆ, ಇಡೀ ರಾಜ್ಯದಲ್ಲಿ ಕೊರೊನಾ ಪ್ರಕರಣಗಳನ್ನ ನಿಯಂತ್ರಣಕ್ಕೆ ತಂದಂತಾಗುತ್ತದೆ ಎಂದು ಸುಧಾಕರ್ ಸಲಹೆ ನೀಡಿದ್ದಾರೆ ಎಂದ ಹೇಳಲಾಗುತ್ತಿದೆ.
ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿಗೆ ಹೆಚ್ಚು ಒತ್ತು ನೀಡುವ ಸಾಧ್ಯತೆಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ ಸರ್ಕಾರ ಕೊರೊನಾ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವ ಸಾಧ್ಯತೆಗಳು ಕಂಡು ಬಂದಿದೆ. ಇನ್ನಷ್ಟು ಮಾಹಿತಿಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.