ಮಲೇಷಿಯಾ ಮಹಿಳೆಯ ಮೇಲೆ ಅತ್ಯಾಚಾರ: ಬೆಂಗಳೂರಿನಲ್ಲಿ ಮಾಜಿ ಸಚಿವ ಅರೆಸ್ಟ್ - Mahanayaka
10:14 PM Tuesday 4 - February 2025

ಮಲೇಷಿಯಾ ಮಹಿಳೆಯ ಮೇಲೆ ಅತ್ಯಾಚಾರ: ಬೆಂಗಳೂರಿನಲ್ಲಿ ಮಾಜಿ ಸಚಿವ ಅರೆಸ್ಟ್

m manikandan
20/06/2021

ಚೆನ್ನೈ: ಮಲೇಷಿಯಾ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ತಮಿಳುನಾಡಿನ ಮಾಜಿ ಸಚಿವ ಎಂ.ಮಣಿಕಂಠನ್ ನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಅತ್ಯಾಚಾರ, ಗರ್ಭಪಾತ ಮತ್ತು ಜೀವ ಬೆದರಿಕೆಗಳ ಆರೋಪವನ್ನು ಎದುರಿಸುತ್ತಿರುವ ಮಣಿಕಂಠನ್, ಪ್ರಕರಣ ದಾಖಲಾದ ಬಳಿಕ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಜಾಮೀನು ನೀಡಲು ನಿರಾಕರಿಸಿತ್ತು.

 

ಜಾಮೀನು ನಿರಾಕರಣೆಯ ಬೆನ್ನಲ್ಲೆ ಬಂಧನದ ಭೀತಿಯಿಂದ ಮಣಿಕಂಠನ್ ಬೆಂಗಳೂರಿನಲ್ಲಿ ಅವಿತಿದ್ದು, ಇದೀಗ ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮಣಿಕಂಠನ್ ಎಐಎಡಿಎಂಕೆಯ ಪ್ರಮುಖ ನಾಯಕರಲ್ಲಿ ಓರ್ವರಾಗಿದ್ದಾರೆ.

ಇತ್ತೀಚಿನ ಸುದ್ದಿ