ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ!

bangalore missing case
12/10/2021

ಮಂಗಳೂರು: ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದು,  ಮಂಗಳೂರಿಗೆ ಬಂದಿಳಿದ ಮಕ್ಕಳ ಬಗ್ಗೆ ಅನುಮಾನಗೊಂಡು ಆಟೋ ಚಾಲಕರು ಮಕ್ಕಳನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಬಿಟ್ಟಿದ್ದಾರೆ. ಈ ಮೂಲಕ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.

ಮೊದಲು ರೈಲು ಮೂಲಕ ಮಕ್ಕಳು ಬೆಳಗಾವಿಗೆ ಹೋಗಿದ್ದು, ಅಲ್ಲಿಂದ ಮೈಸೂರಿಗೆ ಹೋಗಿದ್ದರು. ಬಳಿಕ ಮತ್ತೆ ಬೆಂಗಳೂರಿಗೆ ಹೋಗಿದ್ದರು. ಸಂಜೆ ಮೆಜೆಸ್ಟಿಕ್ ನಿಂದ ಸ್ಲೀಪರ್ ಕೋಚ್ ಬಸ್ ಮೂಲಕ ಮಂಗಳೂರಿಗೆ ಬಂದಿರುವುದಾಗಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನೂ ಮಕ್ಕಳು ತಮ್ಮನ್ನು ಯಾರು ಕೂಡ ಗುರುತಿಸಬಾರದು ಎಂದು ತಮ್ಮ ಸಿಮ್ ಕಾರ್ಡ್ ಮೈಮೇಲಿದ್ದ ಚಿನ್ನಾಭರಣಗಳನ್ನು ಮಂಗಳೂರಿನ ಖಾಸಗಿ ಬಸ್ ನಿಲ್ದಾಣದ ಡಸ್ಟ್ ಬಿಗ್ ಎಸೆದಿದ್ದಾರೆ ಎಂದು ಡಿಸಿಪಿ ಹೇಳಿದರು. ಸದ್ಯ ಪೊಲೀಸರು ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಬೆಂಗಳೂರು ಡಿಸಿಪಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಮಕ್ಕಳ ಹೆತ್ತವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇನ್ನಷ್ಟು ಸುದ್ದಿಗಳು…

ತರಕಾರಿ ವ್ಯಾಪಾರಿಯ ಹನಿಟ್ರ್ಯಾಪ್: ಯುವತಿ ಸಹಿತ ಮೂವರು ಆರೋಪಿಗಳ ಅರೆಸ್ಟ್

ಬಿಜೆಪಿಗೆ ಬಿಗ್ ಶಾಕ್: ಬಿಜೆಪಿ ತೊರೆದು ಪುತ್ರನೊಂದಿಗೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಸಚಿವ!

ಬೊಮ್ಮಾಯಿ ಸಂಪುಟದ 4 ಹಾಲಿ ಸಚಿವರಿಗೆ ಕೋಕ್ ನೀಡುವ ಸಾಧ್ಯತೆ | 8 ಶಾಸಕರಿಗೆ ಶೀಘ್ರವೇ ಸಚಿವ ಸ್ಥಾನ!

ಅವಿದ್ಯಾವಂತರು ದೇಶಕ್ಕೆ ಹೊರೆ, ಅವರು ಉತ್ತಮ ನಾಗರಿಕನಾಗಲು ಹೇಗೆ ಸಾಧ್ಯ? | ಅಮಿತ್ ಶಾ

ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ಐವರು ಸಾವು | ಇಬ್ಬರು ಮಕ್ಕಳ ಸ್ಥಿತಿ ಗಂಭೀರ

ರಾಜಕೀಯ ಅಂದ್ರೆ, ಜನರ ಮೇಲೆ ಫಾರ್ಚುನರ್‌ ಕಾರು ಹರಿಸುವುದಲ್ಲ | ತನ್ನ ಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡ!

ಅನ್ಯಜಾತಿಯ ಯುವತಿಯನ್ನು ಪ್ರೀತಿಸಿದ್ದಕ್ಕೆ ದಲಿತ ಯುವಕನ ಬರ್ಬರ ಹತ್ಯೆ!

ಇತ್ತೀಚಿನ ಸುದ್ದಿ

Exit mobile version