ಬೆಂಗಳೂರು ಪೊಲೀಸ್ ವಶದಲ್ಲಿದ್ದ ಆಫ್ರಿಕಾ ಪ್ರಜೆ ಅನುಮಾನಾಸ್ಪದ ಸಾವು!
ಬೆಂಗಳೂರು: ಡ್ರಗ್ಸ್ ಮಾರಾಟದ ಆರೋಪದಲ್ಲಿ ವಶಕ್ಕೆ ಪಡೆಯಲಾಗಿದ್ದ ಆಫ್ರಿಕಾದ ಪ್ರಜೆಯೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೆ.ಸಿ.ನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಆಫ್ರಿಕಾ ಪ್ರಜೆಯನ್ನು ವಶಕ್ಕೆ ಪಡೆದಿದ್ದರು. ಆತನ ಬಳಿಯಲ್ಲಿ 5 ಗ್ರಾಂ ಎಂಡಿಎಂಎ ಪತ್ತೆಯಾಗಿತ್ತು ಎಂದು ಹೇಳಲಾಗಿತ್ತು. ಆರೋಪಿಯನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ಆತನಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ತಕ್ಷಣವೇ ಆರೋಪಿಯನ್ನು ಪೊಲೀಸರು ಚಿರಾಯು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಆರೋಪಿಯು ಸಾವನ್ನಪ್ಪಿದ್ದಾನೆ. ಪೊಲೀಸರ ವಶದಲ್ಲಿದ್ದಾಗ ಈ ಘಟನೆ ನಡೆದುದ್ದರಿಂದಾಗಿ ಸಹಜವಾಗಿ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಆರೋಪಿಯ ಸಾವಿಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ, ಆರೋಪಿಗೆ ಶೀತ ಆಗಿತ್ತು, ಎದೆ ನೋವು ಆಗುತ್ತಿದೆ ಎಂದು ಆರೋಪಿ ಹೇಳಿರುವುದರಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಲ್ಲಿ ಆರೋಪಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳು…
“ಕಸವು ಕಸದ ಬುಟ್ಟಿಗೆ ಸೇರಿತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆ ಹಿನ್ನೆಲೆ ಪರ-ವಿರೋಧ ಚರ್ಚೆ!
ಗಡ್ಡಧಾರಿಗಳಿಗೆ ಸಿಹಿ ಸುದ್ದಿ: ಮುಂದಿನ ಅವಧಿಯಲ್ಲಿ ನೀವೂ ಸಿಎಂ ಆಗುವ ಸಾಧ್ಯತೆ ಇದೆ!
ರಸ್ತೆಯಲ್ಲಿ ಅಡ್ಡನಿಂತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗೆ ಧರ್ಮದೇಟು!
ಅನಾಥ ಹುಡುಗಿಯನ್ನು ಮಗಳಂತೆ ಸಾಕಿ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಮ್ ಕುಟುಂಬ
ಬಿಜೆಪಿಗೆ ಅಧಿಕಾರ ಮಾತ್ರ ಬೇಕು, ಜನರ ಯೋಗ ಕ್ಷೇಮ ಬೇಡ | ಸತೀಶ್ ಜಾರಕಿಹೊಳಿ
ಉನ್ನಾವೋ ಸಂತ್ರಸ್ತೆಯ ಅಪಘಾತ ಪ್ರಕರಣ: ದೂರುದಾರರ ಆಕ್ಷೇಪಣೆ ರೋಮಾಂಚಕ ಕತೆಯಂತಿವೆ | ದೆಹಲಿ ನ್ಯಾಯಾಲಯ