ಕೆರೆಯಂತಾದ ರಸ್ತೆ: ರಸ್ತೆಯಲ್ಲೇ ಸಿಲುಕಿದ ರಸ್ತೆ | ಬೆಂಗಳೂರಿನ ರಸ್ತೆ ಅವ್ಯವಸ್ಥೆ ಕಂಡು ವಿದೇಶಿ ಪ್ರವಾಸಿಗರಿಗೆ ಶಾಕ್! - Mahanayaka
1:27 PM Thursday 12 - December 2024

ಕೆರೆಯಂತಾದ ರಸ್ತೆ: ರಸ್ತೆಯಲ್ಲೇ ಸಿಲುಕಿದ ರಸ್ತೆ | ಬೆಂಗಳೂರಿನ ರಸ್ತೆ ಅವ್ಯವಸ್ಥೆ ಕಂಡು ವಿದೇಶಿ ಪ್ರವಾಸಿಗರಿಗೆ ಶಾಕ್!

bangalore
05/09/2022

ಬೆಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು,  ಸಿಲಿಕಾನ್ ಸಿಟಿಯ ಹಲವೆಡೆಗಳಲ್ಲಿ ಜಲದಿಗ್ಬಂಧನ ಏರ್ಪಟ್ಟಿದೆ. ರಸ್ತೆಗಳೆಲ್ಲ ಕೆರೆಯಂತಾಗಿದ್ದು, ವಾಹನ ಸವಾರರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ರಸ್ತೆಯಲ್ಲಿ ಪ್ರಯಾಣಿಸುವಂತಾಗಿದೆ.

ಮಳೆಯಿಂದಾಗಿ ರೈನ್ ಬೋ ಲೇಔಟ್ ಸಂಪೂರ್ಣವಾಗಿ ಜಲಾವೃತವಾಗಿದೆ. ಈ ಪ್ರದೇಶದ ಸುಮಾರು ನೂರಕ್ಕೂ ಅಧಿಕ ಮನೆಗಳ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇನ್ನೂ ಕೆಂಪೇಗೌಡ ಏರ್ಪೋರ್ಟ್ ನಿಂದ ಆಗಮಿಸುತ್ತಿರುವ ವಿದೇಶಿಯರು ಬೆಂಗಳೂರಿನ ಸ್ಥಿತಿ ಕಂಡು ಆಘಾತಕ್ಕೊಳಗಾಗಿದ್ದು, ವಿಮಾನದಿಂದ ಬಸ್ ನತ್ತ ತೆರಳಲು ಹರಸಾಹಸ ಪಡುತ್ತಿರುವ ದೃಶ್ಯ ಕಂಡು ಬಂತು.

ಪ್ಯಾಲೇಸ್ ರಸ್ತೆಯ ವೀರಶೈವ ಮಹಾಸಭಾ ಮುಂಭಾಗದಲ್ಲಿ  ಮರವೊಂದು ಬಿದ್ದಿದ್ದು, ಪರಿಣಾಮವಾಗಿ  ಮೈಸೂರು ಬ್ಯಾಂಕ್ ರಸ್ತೆಯಿಂದ ವಿಂಡ್ಸರ್ ಮ್ಯಾನರ್ ಜಂಕ್ಷನ್ ಹಾಗೂ ಬಳ್ಳಾರಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.  ಬಳಿಕ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ವೈಟ್ ಫೀಲ್ಡ್ ರಸ್ತೆಯಲ್ಲಿ ರಸ್ತೆಯ ಗುಂಡಿಯಲ್ಲಿ ಬಿಎಂಟಿಸಿ ಬಸ್ಸೊಂದು ಸಿಲುಕಿದ ಘಟನೆ ನಡೆದಿದ್ದು, ನೀರಿನಿಂದ ಆವೃತವಾಗಿದ್ದ ರಸ್ತೆಯ ಗುಂಡಿಯಲ್ಲಿ ಬಸ್ ಸಿಲುಕಿದ್ದು,  ಬಳಿಕ ಸಾರ್ವಜನಿಕರು ಬಸ್ಸನ್ನು ತಳ್ಳಿ ರಸ್ತೆಯ ಗುಂಡಿಯಿಂದ ಪಾರು ಮಾಡಿದ್ದಾರೆ. ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗಿದೆ.

ಇನ್ನೂ ಬೆಂಗಳೂರಿನಲ್ಲಿ ಮಹಾಮಳೆಯ ಪರಿಣಾಮ ಹಲವು ಪಾರ್ಕ್ ಗಳು ಕೂಡ ಜಲಾವೃತಗೊಂಡಿದೆ, ರಸ್ತೆ ಸಮಸ್ಯೆ, ಚರಂಡಿ ಅವ್ಯವಸ್ಥೆಯ ನಡುವೆ ಸುರಿಯುತ್ತಿರುವ ಭಾರೀ ಮಳೆ ರಸ್ತೆಯನ್ನೇ ನದಿಯನ್ನಾಗಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ