ಬಾಂಗ್ಲಾದೇಶ ಬಿಕ್ಕಟ್ಟು: ದುರ್ಗಾ ಪೂಜಾ ಮಂಟಪದ ಮೇಲಿನ ದಾಳಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ
ಬಾಂಗ್ಲಾದೇಶದಲ್ಲಿ ಧಾರ್ಮಿಕ ಸ್ಥಳಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳು, ವಿಶೇಷವಾಗಿ ಢಾಕಾದಲ್ಲಿ ಪೂಜಾ ಮಂಟಪದ ಮೇಲಿನ ದಾಳಿ ಮತ್ತು ಸತ್ಖೀರಾದ ಜೆಶೋರೇಶ್ವರಿ ಕಾಳಿ ದೇವಾಲಯದಿಂದ ಧಾರ್ಮಿಕ ಕಲಾಕೃತಿಯ ಕಳ್ಳತನದ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತವು ಈ ಘಟನೆಗಳನ್ನು ‘ಶೋಚನೀಯ ಕೃತ್ಯಗಳು’ ಎಂದು ಕರೆದಿದೆ. ಅಲ್ಲದೇ ಅಲ್ಪಸಂಖ್ಯಾತರ, ವಿಶೇಷವಾಗಿ ಹಿಂದೂಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಪೂಜಾ ಸ್ಥಳಗಳನ್ನು ರಕ್ಷಿಸಲು ಬಾಂಗ್ಲಾದೇಶ ಸರ್ಕಾರಕ್ಕೆ ಕರೆ ನೀಡಿದೆ.
ಹಳೆಯ ಢಾಕಾದ ತಂತಿಬಜಾರ್ ಪ್ರದೇಶದ ದುರ್ಗಾ ಪೂಜಾ ಮಂಟಪದ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದೆ ಎಂದು ವರದಿಯಾಗಿದೆ. ಸ್ಥಳೀಯ ಕಾಲಮಾನ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸಣ್ಣ ಬೆಂಕಿಗೆ ಉಂಟಾಗಿದೆ. ಸ್ಥಳೀಯ ವರದಿಗಳ ಪ್ರಕಾರ, ಯುವಕರ ಗುಂಪು ಪೆಟ್ರೋಲ್ ತುಂಬಿದ ಗಾಜಿನ ಬಾಟಲಿಯನ್ನು ಬಲಿಪೀಠವನ್ನು ಗುರಿಯಾಗಿಸಿಕೊಂಡು ಎಸೆದಿದ್ದು, ಭಕ್ತರಲ್ಲಿ ಭೀತಿಯನ್ನುಂಟು ಮಾಡಿದೆ.
ದಾಳಿಕೋರರನ್ನು ಬೆನ್ನಟ್ಟಿದ ಸ್ವಯಂಸೇವಕರು ಚಾಕುಗಳಿಂದ ಪ್ರತೀಕಾರ ತೀರಿಸಿಕೊಂಡಿದ್ದರಿಂದ ಐದು ಜನರು ಗಾಯಗೊಂಡಿದ್ದಾರೆ.
ಇನ್ನು ಢಾಕಾ ಮೆಟ್ರೋಪಾಲಿಟನ್ ಪೊಲೀಸರ ಡಿಟೆಕ್ಟಿವ್ ಬ್ರಾಂಚ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಕಮಿಷನರ್ ರೆಜೌಲ್ ಕರೀಮ್ ಮಲ್ಲಿಕ್ ಹೇಳಿದ್ದಾರೆ. ಆರಂಭಿಕ ತನಿಖೆಯು ದಾಳಿಯು ಮಗ್ಗಿಂಗ್ ಘಟನೆಗೆ ಸಂಬಂಧಿಸಿದೆ ಎಂದು ಸೂಚಿಸಿದ್ದರೂ, ಹೆಚ್ಚಿನ ವಿವರಗಳಿಗಾಗಿ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth