ಬ್ಯಾಂಕ್ ಗಳ ಚೆಕ್ ಗಳಿಗೆ ಬೆಂಕಿ ಹಚ್ಚಿದ ವಾಟಾಳ್ ನಾಗರಾಜ್ - Mahanayaka
9:56 PM Thursday 14 - November 2024

ಬ್ಯಾಂಕ್ ಗಳ ಚೆಕ್ ಗಳಿಗೆ ಬೆಂಕಿ ಹಚ್ಚಿದ ವಾಟಾಳ್ ನಾಗರಾಜ್

vatalnagaraj
25/09/2021

ಬೆಂಗಳೂರು:  ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ವಿರೋಧಿಸಿ ರಾಜ್ಯದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಹಿಂದಿ ಭಾಷೆಯಲ್ಲಿರುವ ಚೆಕ್ ಗಳನ್ನು  ಸುಡುವ ಮೂಲಕ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ನಡೆಸಿದರು.

ಹಲವು ಕನ್ನಡ ಸಂಘಟನೆಗಳ ಸಹಕಾರದೊಂದಿಗೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ  ವಾಟಾಳ್ ನಾಗರಾಜ್ ಅವರು ಹಿಂದಿ ಭಾಷೆ ಹೊಂದಿದ್ದ ಚೆಕ್ ಗಳನ್ನು ಸುಟ್ಟು, ಎಲ್ಲ ಬ್ಯಾಂಕ್ ಗಳ ಚೆಕ್ ಗಳು ಕನ್ನಡಲ್ಲಿಯೇ ಇರಬೇಕು ಎಂದು ಆಗ್ರಹಿಸಿದರು.

ನಮಗೆ ಹಿಂದಿ ಬೇಡವೇ ಬೇಡ, ಈ ನಾಡಿನ ಭಾಚೆ ಕನ್ನಡ ಹಾಗಾಗಿ ಎಲ್ಲೆಲ್ಲೂ ಕನ್ನಡವಾಗಬೇಕು. ಬ್ಯಾಂಕ್ ಗಳಲ್ಲಿ ಸಂಪೂರ್ಣವಾಗಿ ಕನ್ನಡವನ್ನೇ ಬಳಸಬೇಕು. ಅಂಚೆ ಕಚೇರಿಗಳಲ್ಲಿ ಕೂಡ ಹಿಂದಿ ಬೇಡ. ಕನ್ನಡಿಗರಿಗೆ ಬ್ಯಾಂಕ್ ಗಳಲ್ಲಿ ಅತೀ ಹೆಚ್ಚು ಉದ್ಯೋಗ ನೀಡಬೇಕು. ಬ್ಯಾಂಕ್ ಅಧಿಕಾರಿಗಳು ಕನ್ನಡವರಾಗಿರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ತರಗತಿ ಕೋಣೆಯಲ್ಲಿಯೇ ಮಹಿಳೆಯೊಂದಿಗೆ ಅಸಹ್ಯವಾಗಿ ನಡೆದುಕೊಂಡ ಮುಖ್ಯ ಶಿಕ್ಷಕ | ವಿಡಿಯೋ ವೈರಲ್

ರಾಜ್ಯದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ: ತರಕಾರಿ ತರಲು ಹೋದ ಬಾಲಕಿಯ ಮೇಲೆ ಅತ್ಯಾಚಾರ

ಕೃಷ್ಣ ಬೆಣ್ಣೆ ಕದ್ದರೆ ತುಂಟಾಟ, ಈ ಬಾಲಕ ಹಸಿವಿನಿಂದ ತಿಂಡಿ ಕದ್ದರೆ ಅಪರಾಧವೇ? | ನ್ಯಾಯಾಧೀಶರ ಪ್ರಶ್ನೆ

ಅಸ್ಪೃಶ್ಯತೆ ಅನಿಷ್ಟ ಪದ್ಧತಿ ಅದನ್ನು ತೊಲಗಿಸೋಣ | ಗ್ರಾಮಸ್ಥರಿಗೆ ಪ್ರತಿಜ್ಞೆ ಮಾಡಿಸಿದ ಪೊಲೀಸರು

ಅ.3ರಿಂದ 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಶೇ.100ರಷ್ಟು ಹಾಜರಾತಿಗೆ ಅವಕಾಶ | ಬಸವರಾಜ ಬೊಮ್ಮಾಯಿ

ರಾಮ, ಕೃಷ್ಣ, ಶಿವ ಭಾರತದ ಮುಸ್ಲಿಮರ ಪೂರ್ವಜರು ಎಂದ ಉತ್ತರ ಪ್ರದೇಶ ಸಚಿವ!

ತಾತಾ ಆದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ | ದೇವೇಗೌಡ್ರ ಮನೆಯಲ್ಲಿ ಸಂಭ್ರಮ

ಪ್ರತಿಭಟನಾಕಾರನ ದೇಹದ ಮೇಲೆ ಹಾರಿಹಾರಿ ಬಿದ್ದಿದ್ದ ಪತ್ರಕರ್ತ ಅರೆಸ್ಟ್

ಇತ್ತೀಚಿನ ಸುದ್ದಿ