ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ: ರಾತ್ರಿಯಿಡೀ ಬ್ಯಾಂಕ್ ಲಾಕರ್ ನಲ್ಲೇ ಸಿಲುಕಿದ್ದ ವೃದ್ಧ
ಹೈದರಾಬಾದ್: ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ವೃದ್ಧರೊಬ್ಬರು ರಾತ್ರಿಯಿಡೀ ಬ್ಯಾಂಕ್ ಲಾಕರ್‌ನಲ್ಲಿ ಸಿಲುಕಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಕೃಷ್ಣಾ ರೆಡ್ಡಿ(85) ಲಾಕರ್‌ನಲ್ಲಿ ಸಿಲುಕಿದ್ದ ವೃದ್ಧ. ಜ್ಯುಬಿಲಿ ಹಿಲ್ಸ್‍ನ ನಿವಾಸಿ ಕೃಷ್ಣಾರೆಡ್ಡಿ ಅವರು ಕೆಲವು ದಾಖಲೆಗಳನ್ನು ಪಡೆದುಕೊಳ್ಳಲು ಬಂಜಾರ ಹಿಲ್ಸ್ ಪ್ರದೇಶದ ಯೂನಿಯನ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿದ್ದರು. ಇವುಗಳ ಪರಿಶೀಲನೆಯ ನಂತರ ಅವರನ್ನು ಬ್ಯಾಂಕ್ ಲಾಕರ್ ರೂಂಗೆ ಕಳುಹಿಸಲಾಯಿತು.
ಕೃಷ್ಣಾ ರೆಡ್ಡಿ ಅವರು ಬ್ಯಾಂಕ್ ಮುಚ್ಚುವ ಸಮಯವಾಗಿದೆ ಎನ್ನುವ ವಿಷಯವನ್ನು ಕೃಷ್ಣಾ ರೆಡ್ಡಿ ಗಮನಿಸಿರಲಿಲ್ಲ. ಮತ್ತೊಂದೆಡೆ ಕೃಷ್ಣಾ ರೆಡ್ಡಿ ಬ್ಯಾಂಕ್ ಲಾಕರ್ ನಲ್ಲಿರುವುದು ಬ್ಯಾಂಕ್ ಸಿಬ್ಬಂದಿಯ ಗಮನಕ್ಕೆ ಬಾರದೆ ಬೀಗ ಹಾಕಿ ಮನೆಗೆ ತೆರಳಿದ್ದಾರೆ.
ರಾತ್ರಿಯಾದರೂ ಕೃಷ್ಣಾ ರೆಡ್ಡಿ ಮನೆಗೆ ಬಾರದ ಕಾರಣ ಅವರ ಕುಟುಂಬಸ್ಥರು ಆತಂಕಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಅವರನ್ನು ಪತ್ತೆ ಹೆಚ್ಚಿದ್ದಾರೆ. ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ದ ಕೃಷ್ಣಾ ರೆಡ್ಡಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಉಕ್ರೇನ್ ನ ಮೈಕೊಲೈವ್ ಮೇಲೆ ರಷ್ಯಾ ದಾಳಿ: 12ಕ್ಕೆ ಏರಿಕೆಯಾದ ಮೃತರ ಸಂಖ್ಯೆ
SSLC ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ನೀಡಿದ್ದಕ್ಕೆ 7 ಸಿಬ್ಬಂದಿ ಅಮಾನತು