ಸ್ಥಳೀಯ ಭಾಷೆ ತಿಳಿಯದವರು ಬ್ಯಾಂಕ್ ಗಳಲ್ಲಿ ಉದ್ಯೋಗದಲ್ಲಿರಲು ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್ ಸೂಚನೆ
ಸ್ಥಳೀಯ ಭಾಷೆ ವಿಚಾರವಾಗಿ ಬ್ಯಾಂಕ್ ಗಳಲ್ಲಿ ನಡೆಯುತ್ತಿರುವ ಭಾಷಾ ದಬ್ಬಾಳಿಕೆಗೆ ಅಂತ್ಯ ಹಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದಾಗಿದ್ದು, ಸ್ಥಳೀಯ ಭಾಷೆಗಳಲ್ಲಿಯೇ ವ್ಯವಹರಿಸುವಂತೆ ಬ್ಯಾಂಕ್ ಗಳ ಆಡಳಿತ ಮಂಡಳಿಗಳಿಗೆ ಅವರು ಸೂಚಿಸಿದ್ದಾರೆ.
ಕರ್ನಾಟಕದ ಸರಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸ ಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಶುಕ್ತವಾರ ನಡೆದ ಭಾರತೀಯ ಬ್ಯಾಂಕ್ ಗಳ ಒಕ್ಕೂಟದ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಬ್ಯಾಂಕ್ಗಳ ಆಡಳಿತ ಮಂಡಳಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಸ್ಥಳೀಯ ಭಾಷೆಗಳನ್ನು ತಿಳಿಯದೇ ಇರುವವರು ಬ್ಯಾಂಕ್ ನ ಶಾಖೆಗಳಲ್ಲಿ ಉದ್ಯೋಗದಲ್ಲಿ ಇರಲು ಸಾಧ್ಯವಿಲ್ಲ. ಜತೆಗೆ ಅಧಿಕಾರಿಗಳು ನಿಗದಿತ ಭಾಷೆ ಯಲ್ಲಿಯೇ ಮಾತನಾಡಬೇಕು.ಇಲ್ಲದೇ ಇದ್ದರೆ ಅವರು ದೇಶದ ಪ್ರಜೆಗಳೇ ಅಲ್ಲ ಎನ್ನುವಂತಿಲ್ಲ ಎಂದಿದ್ದಾರೆ.
ಸ್ಥಳೀಯ ಭಾಷೆಗಳಲ್ಲಿ ವ್ಯವಹರಿಸಲು ಸಾಧ್ಯವಾಗದಿರುವ ಅಧಿ ಕಾರಿಯನ್ನು ಗ್ರಾಹಕರ ಜತೆಗಿನ ನೇರ ವ್ಯವಹಾರದಿಂದ ದೂರವಿಡಬೇಕು ಎಂದು ಅವರು ಸೂಚಿಸಿದ್ದಾರಲ್ಲದೇ, ಬ್ಯಾಂಕ್ ನಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಕಲಿಯಲು ಅಡ್ಡಿ ಏನು ಎಂದು ಪ್ರಶ್ನಿಸಿರುವ ನಿರ್ಮಲಾ ಸೀತಾರಾಮನ್, ನಾನು ದಕ್ಷಿಣ ಭಾರತದಿಂದ ಬಂದವಳು. ಹಿಂದಿಯನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ಕರ್ಮ ಭೂಮಿ ಇಲ್ಲಿ ಇರುವಾಗ ಸ್ಥಳೀಯ ಭಾಷೆಯನ್ನು ಕಲಿಯಲೇಬೇಕು ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka